ಡಿಎಸ್‍ಎಸ್ ತಾಲೂಕು ಅಧ್ಯಕ್ಷರಾಗಿ ಧರ್ಮರಾಜ ನೇಮಕ
ತಾಲೂಕು ಮಟ್ಟದ ಡಿಎಸ್‍ಎಸ್ (ಮೂರ್ತಿ ಬಣ) ದ ನೂತನ ಪದಾಧಿಕಾರಿಗಳ ನೇಮಕ
ತಾಲೂಕ ಡಿಎಸ್‍ಎಸ್‍ಗೆ ನೂತನ ಪದಾಧಿಕಾರಿಗಳ ನೇಮಕ
ಡಿಎಸ್‍ಎಸ್ ತಾಲೂಕು ಅಧ್ಯಕ್ಷರಾಗಿ ಧರ್ಮರಾಜ ನೇಮಕ
yadgiri, ಶಹಾಪುರಃ ತಾಲೂಕು ಮಟ್ಟದ ಡಿಎಸ್‍ಎಸ್ (ಮೂರ್ತಿ ಬಣ) ದ ನೂತನ ಪದಾಧಿಕಾರಿಗಳನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಲಕ್ಷ್ಮೀಕಾಂತ ಬಿರಾಳ (ಗೌರವಧ್ಯಕ್ಷ) ಧರ್ಮರಾಜ ನಾಟೇಕಾರ ಹೋತಪೇಟ (ಅಧ್ಯಕ್ಷ) ಇಂದ್ರ ಪೂಜಾರಿ (ಉಪಾಧ್ಯಕ್ಷ) ನಾಗರಾಜ ಗುತ್ತಿಪೇಠ (ಕಾರ್ಯದರ್ಶಿ) ಪ್ರಕಾಶ ಬಿರಾಳ (ಖಜಾಂಚಿ) ಯಾಗಿ ನೂತನ ಪದಾಧಿಕಾರಿಗಳ ನೇಮಕ ಮಾಡಿ ಸಂಘದ ಜಿಲ್ಲಾಧ್ಯಕ್ಷ ಹಣಮಂತಪ್ಪ ಕಟ್ಟಿಮನಿ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಹಣಮಂತಪ್ಪ, ಸಂಘಟನಾತ್ಮಕವಾಗಿ ಪದಾಧಿಕಾರಿಗಳು ತೊಡಗಿಸಿಕೊಳ್ಳಬೇಕು. ಸಮಾಜದ ಏಳ್ಗೆಗಾಗಿ, ನಾಡಿನ ಹಿತಾಸಕ್ತಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು. ಅನ್ಯಾಯ ವಿರುದ್ಧ ಸಂಘಟನಾತ್ಮಕವಾಗಿ ಹೋರಾಟ ನಡೆಸಿದ್ದಲ್ಲಿ ಮಾತ್ರ ನಾವುಗಳು ಯಶಸ್ವಿಯಾಗಲು ಸಾಧ್ಯವಿದೆ. ಸಂವಿಧಾನ ಕುರಿತು ಸಮಗ್ರ ಅಧ್ಯಯನ ಮಾಡಬೇಕು. ದೇಶದ ಕಾನೂನಿನ ಅರಿವು ಮೂಡಿಸಬೇಕು. ನಾಗರಿಕರಲ್ಲೂ ಕಾನೂನಾತ್ಮಕ ಹೋರಾಟ ಮನೋಭಾವನೆ ಬೆಳೆಸಬೇಕು. ಸಂವಿಧಾನ ನಮಗೆ ನೀಡಿದ ಹಕ್ಕುಗಳನ್ನು ಪಡೆಯುವಲ್ಲಿ ಮುನ್ನುಗ್ಗಬೇಕು.
ಆ ನಿಟ್ಟಿನಲ್ಲಿ ಬಲಿಷ್ಠ ಸಂಘಟನೆ ಕಟ್ಟಬೇಕು. ಹಿಂದುಳಿದ, ದಲಿತರನ್ನು ಸಮಾಜಮುಖಿಗೆ ತರುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಪಂಡಿತ ನಿಂಬರಕರ್, ಲಕ್ಷ್ಮಣ ಶಟ್ಟಿ, ಮೌನೇಶ ದರಿಯಾಪುರ, ಸಾಯಬಣ್ಣ ಸುರಪುರ, ಸಚಿನ್ ಹಳಿಸಗರ, ಮುದಕಪ್ಪ ಸಲಾದಪುರ, ಶರಣಪ್ಪ ಪೂಜಾರಿನಾಗಪ್ಪ ಬಿರಾಳ, ರಡ್ಡೆಪ್ಪ ಸಾಹುಶೇಖಪ್ಪ ಮುಡಬೂಳ,ಶ್ರೀಮಂತ ಪೂಜಾರಿ ಸೇರಿದಂತೆ ಇತರರಿದ್ದರು.