ಮೆಥೋಡಿಸ್ಟ್ ಚರ್ಚ್‍ನಲ್ಲಿ ಈಸ್ಟರ್ ಹಬ್ಬ ಆಚರಣೆ
yadgiri, ಶಹಾಪುರಃ ಏಸು ಕ್ರಿಸ್ತ ಮತ್ತೆ ನಮಗಾಗಿ ಹುಟ್ಟಿ ಬಂದಿದ್ದಾನೆ ಎಂಬ ನಂಬಿಕೆ ಹೊಂದಿರುವ ಕ್ರೈಸ್ತ್ ಸಮುದಾಯದವರು ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುವದು ವಾಡಿಕೆ. ಅದರಂತೆ ಇಂದು ಏಸುವಿನ ಸ್ಮರಣೆ ಮಾಡುವ ಮೂಲಕ ಸಿಹಿ ತಿಂಡಿ ಇತ್ಯಾದಿ ಹಬ್ಬದೂಟ ಮಾಡುವ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಪಾಸ್ಟರ್ ರೆವರೆಂಡ್ ಆನಂದ್ ತಿಳಿಸಿದರು.
ನಗರದ ಮೆಥೋಡಿಸ್ಟ್ ಚರ್ಚ್‍ನಲ್ಲಿ ಈಸ್ಟರ್ ಹಬ್ಬದಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪವಿತ್ರ ಭಾನುವಾರದಂದೆ ಬರುವ ಈಸ್ಟರ್ ಕ್ರೈಸ್ತರಿಗೆ ಮಹತ್ವದ ಹಬ್ಬ, ಶನಿವಾರ ರಾತ್ರಿಯಿಂದಲೇ ನಾವೆಲ್ಲ ಚರ್ಚ್‍ಗಳಲ್ಲಿ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡಿರುತ್ತೇವೆ. 40 ದಿನಗಳ ವ್ರತಾಚರಣೆ ನಂತರ ಈಸ್ಟರ್ ಹಬ್ಬ ಕೊನೆಗೊಳ್ಳುತ್ತದೆ. ಕ್ರಿಸ್‍ಮಸ್ ಆಚರಣೆ ಏಸುವಿನ ಜನ್ಮ ದಿನದ ಸಂತಸ ಕಂಡರೆ, ಈಸ್ಟರ್ ಹಬ್ಬ ಸಮುದಾಯಕ್ಕೆ ಭರವಸೆಯ ಬೆಳಕು ಮೂಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುರೇಂದ್ರ ಪಾಟೀಲ್ ಮಡ್ನಾಳ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಮರಿರಾಜ ನಿರೂಪಿಸಿದರು. ಚರ್ಚ್ ಕಾರ್ಯದರ್ಶಿ ಶಶಿಕಾಂತ, ಖಜಾಂಚಿ ಇಮಾನ್ಯುವೆಲ್ ವಿಜಯರಾಜ್, ಹಿರಿಯರಾದ ವೈ.ಸುಮಿತ್ರಾ, ಶಾಂತಪ್ಪ, ಜಾನ್ ರಾಜಕುಮಾರ ಇತರರಿದ್ದರು.