ಪ್ರಮುಖ ಸುದ್ದಿ
ದೆಹಲಿಃ ಸಂಜೆ ಬಿಜೆಪಿ ಕಚೇರಿಗೆ ಮೋದಿ, ಕಾರ್ಯಕರ್ತರೊಂದಿಗೆ ಸಂಭ್ರಮ ಆಚರಣೆ
ಸಂಭ್ರಮಾಚರಣೆಯಲ್ಲಿ ಮುಳುಗಿದ ಬಿಜೆಪಿ
ದೆಹಲಿಃ ಸಂಜೆ ಬಿಜೆಪಿ ಕಚೇರಿಗೆ ಮೋದಿ, ಕಾರ್ಯಕರ್ತರೊಂದಿಗೆ ಸಂಭ್ರಮ ಆಚರಣೆ
ದೆಹಲಿಃ ಪಂಚರಾಜ್ಯ ಚುನಾವಣೆ ಫಲಿತಾಂಶ 4 ರಾಜ್ಯಗಳಲ್ಲಿ ಸರ್ಕಾರ ರಚನೆ ಸಂದರ್ಭ ಒದಗಿ ಬಂದಿದ್ದು, ಕಾರ್ಯಕರ್ತರಿಗೂ ಮತ್ತು ಗೆಲುವಿಗೆ ಕಾರಣರಾದ ಮತದಾರ ಬಾಂಧವರಿಗೂ ಅಭಿನಂದನೆ ಸಲ್ಲಿಸಲು ಇಂದು ಸಂಜೆ ಇಲ್ಲಿನ ಬಿಜೆಪಿ ಕಚೇರಿಗೆ ಪ್ರಧಾನಿ ಮೋದಿಯವರು ಆಗಮಿಸಲಿದ್ದಾರೆ.
ಈಗಾಗಲೇ ಕಚೇರಿ ಬಳಿ ಕಾರ್ಯಕರ್ತರು, ಪಕ್ಷದ ಪ್ರಮುಖರು ಜಮಾವಣೆಗೊಂಡಿದ್ದು, ಗೆಲುವಿನ ಸಂಭ್ರಮದಲ್ಲಿ ಮುಳುಗಿದ್ದಾರೆ. ಸಂಜೆ ವೇಳೆಗೆ ಪ್ರಧಾನಿ ಮೋದಿಯವರು ಅವರೊಂದಿಗೆ ಸೇರಲಿದ್ದು, ನಂತರ ಮಾಧ್ಯಮದೊಂದಿಗೆ ಗೆಲುವಿನ ಸಂದೇಶ ನೀಡಲಿದ್ದಾರೆ.