ಸಂಬರಗಿ ಮತ್ತೊಂದು ಸ್ಪೋಟಕ ಹೇಳಿಕೆ, GAMBLING ನಲ್ಲಿ ಸಿನಿ ನಟರು
ಸಂಬರಗಿ ಮತ್ತೊಂದು ಸ್ಪೋಟಕ ಹೇಳಿಕೆ, GAMBLING ನಲ್ಲಿ ಸಿನಿ ನಟರು.!
ಬೆಂಗಳೂರಃ ಚಂದನವನದಲ್ಲಿ ಈಗಾಗಲೇ ಡ್ರಗ್ಸ್ ಮಾಫಿಯಾ ಪ್ರಕರಣ ಬಿರುಗಾಳಿ ಬೀಸಿದ್ದು, ಕ್ಷಣಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ.
ಡ್ರಗ್ಸ್ ಮಾಫಿಯಾ ಸ್ಯಾಂಡಲ್ ವುಡ್‌ನಲ್ಲಿ ಬೀಸಿದ ಗಾಳಿ ಇದೀಗ ಅಂತರ ರಾಜ್ಯ, ದೇಶ ವಿದೇಶಗಳಿಗೂ ಬಿಸಿ ತಟ್ಟುತ್ತಿದೆ. ಅನ್ಯ ದೇಶಗಳಿಂದ ಡ್ರಗ್ಸ್ ನಮ್ಮ ದೇಶಕ್ಕೆ ಹೇಗೆ ಸರಬರಾಜು ಆಗುತ್ತಿದೆ ಎಂಬುದನ್ನು ಪತ್ತೆ ಹಿಡಿದು ಅದರಲ್ಲಿ ಭಾಗಿಯಾದ ಹಲವಾರು ದಂಧೆಕೋರರನ್ನು ಪೊಲೀಸರು ಸದೆ ಬಡೆಯುತ್ತಿದ್ದಾರೆ. ಈ ನಡುವೆ ಸಾಮಾಜಿಕ ಕಾರ್ಯರ್ತ ಪ್ರಶಾಂತ ಸಂಬರಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಗ್ಯಾಂಬಲಿಂಗ್ ನಲ್ಲಿ ಸುಮಾರು 12 ಜನ ಸಿನಿಮಾರಂಗದ ಗಣ್ಯರು ಭಾಗಿಯಾಗಿದ್ದಾರೆ. ಅದರಲ್ಲಿ ಐವರ ಹೆಸರು ಸಿಸಿಬಿಗೆ ನೀಡಿದ್ದೇನೆ ಎಂದು ಪ್ರಶಾಂತ ಸಂಬರಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಬಹುದೊಡ್ಡ ಜೂಜಾಟ ಪ್ರಕರಣ ಇದೀಗ ಸೌಂಡ್ ಮಾಡುವ ಸಾಧ್ಯತೆ ಇದು ಸಿನಿಮಾರಂಗವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಲಿದೆ ಎಂದು ಅಂದಾಜಿಸಲಾಗುತ್ತದೆ.