ಈ ರೀತಿ ಹಾರುವ ಓತಿ ನೀವೂ ನೋಡಿದ್ದೀರಾ? ಪಶ್ಚಿಮ ಘಟ್ಟದ ವಿಶೇಷ ಸಂಪತ್ತು ಇದು..!
ನೀವು ಸಾಹಿತ್ಯ ಲೋಕದ ಕುರಿತು ಒಂದಿಷ್ಟಾದರು ಆಸಕ್ತಿ ಹೊಂದಿರುವವರಾಗಿದ್ದರೆ ನಿಮಗೆ ಹಾರುವ ಓತಿ ಎಂದ ಕೂಡಲೆ ಪೂರ್ಣ ಚಂದ್ರ ತೇಜಸ್ವಿ ಅವರ ಕರ್ವಾಲೋ ಕೃತಿ ನೆನಪಿಗೆ ಬರುತ್ತದೆ. ಸಾಹಿತ್ಯ ಪ್ರಿಯರು ಈ ಕೃತಿಯನ್ನು ಆರಾಧಿಸುವವಷ್ಟು ಅತ್ಯುತ್ತಮ ಕೃತಿ ಇದು. ನೀವು ತೇಜಸ್ವಿ ಅವರ ಅಭಿಮಾನಿಯಾಗಬೇಕಾದರೆ ಇದೊಂದು ಕೃತಿ ಓದಿದರೆ ಸಾಕು.
ನೀವು ತೇಜಸ್ವಿ ಅವರ ಎಲ್ಲಾ ಕೃತಿಗಳ ಆರಾಧಿಸಲು ಆರಂಭಿಸುತ್ತೀರಿ.
ಏಕೆಂದರೆ ಈ ಕೃತಿಯಲ್ಲಿ ಬರುವ ಪ್ರತಿಯೊಂದು ಪಾತ್ರವೂ ಹಾಗೆಯೇ ಇದೆ. ಇದರ ಜೊತೆಗೆ ಹಾರುವ ಓತಿಯ ಹುಡುಕುವ ಅವರ ಸಾಹಸಮಯ ಯಾತ್ರೆ ಕಣ್ಣಿಗೆ ಕಟ್ಟಿದಂತಿದೆ. ಈಗ್ಯಾಕೆ ಈ ಹಾರುವ ಓತಿಯ ವಿಚಾರ ಬಂದಿದೆ ಎಂದು ನಿಮಗೆ ಅಚ್ಚರಿ ಎನಿಸುತ್ತಿರಬಹುದು. ಈ ಹಾರುವ ಓತಿಯ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ.
ತೇಜಸ್ವಿ ಅವರ ಕೃತಿಯಲ್ಲಿ ಈ ಹಾರುವ ಓತಿಯನ್ನು ಅವರು ಹುಡುಕಿಕೊಂಡು ಹೋಗುತ್ತಾರೆ. ಜೊತೆಗೆ ಇವು ಬೇರೆ ಎಲ್ಲಿಂದಲೋ ಬಂದು ಇಲ್ಲಿ ನೆಲೆಸಿವೆ ಮುಂದೆ ಇವುಗಳ ಸಂತತಿ ಹೆಚ್ಚಾಗಲು ಬಹುದು ಎಂದು ಅವರೇ ಮುನ್ಸೂಚನೆಯನ್ನೂ ನೀಡಿದ್ದಾರೆ. ಅವರ ಆಸೆಯಂತೆ ಈಗ ಹಾರುವ ಓತಿಗಳ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.
ಈ ಚಿತ್ರದಲ್ಲಿರುವ ಓತಿಯನ್ನು ನೀವೇನಾದರೂ ನೋಡಿದ್ದೀರಾ ಹೀಗೊಂದು ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಕೇಳಲಾಗಿದ್ದು, ಎಲ್ಲರಿಗೂ ಈ ಓತಿ ಕಂಡು ಅಚ್ಚರಿಯಾಗಿದೆ. ಏಕೆಂದರೆ ಈ ರೀತಿ ಹಾರುವ ಓತಿಗಳು ಈಗಲೂ ಇವೆಯೇ ಪ್ರಶ್ನೆ ಹಲವರಲ್ಲಿ ಮೂಡಿದೆ. ಆದ್ರೆ ಈ ಓತಿಗಳು ಪಶ್ಚಿಮ ಘಟ್ಟಗಳು, ಮಲೆನಾಡು ಭಾಗದಲ್ಲಿ ಇಂದಿಗೂ ನೋಡಬಹುದು.
ಹೌದು ಮರದಿಂದ ಮರಕ್ಕೆ ಇವು ಹಾರುತ್ತವೆ. ಹೆಚ್ಚಾಗಿ ಅಡಕೆ ಹಾಗೂ ತೆಂಗಿನ ಮರದಲ್ಲಿ ಇವನ್ನು ನೋಡಬಹುದು. ಆದರೆ ಗಮಕನವಿಟ್ಟು ನೋಡಿದಾಗ ಮಾತ್ರ ಇವು ಕಾಣಿಸುತ್ತವೆ. ಸಾಮಾನ್ಯವಾಗಿ ಇವುಗಳ ಮೈ ಬಣ್ಣ ಮರದ ಬಣ್ಣವನ್ನೇ ಹೋಲುವುದುರಿಂದ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಕಾಣಿಸುತ್ತವೆ.
ಇವುಗಳಿಗೆ ಯಾವ ರೆಕ್ಕೆಗಳು ಇರುವುದಿಲ್ಲ
ಅಚ್ಚರಿ ವಿಚಾರ ಏನೆಂದರೆ ಹಾರುವ ಓತಿಗಳಿಗೆ ಯಾವುದೆ ರೆಕ್ಕೆಗಳಿರುವುದಿಲ್ಲ. ಬದಲಿಗೆ ಅವುಗಳ ಕಾಲಿನಿಂದ ಚರ್ಮ ರೆಕ್ಕೆಯಾಗಿ ಪರಿವರ್ತನೆಯಾಗುತ್ತದೆ. ಅದು ಹಾರಾಡುವಾಗ ಚರ್ಮವೇ ರೆಕ್ಕೆಯಂತೆ ಅರಳುತ್ತದೆ. ಹಾರಿ ಮರದ ಮೇಲೆ ಕುಳಿತಾಗ ಆ ಚರ್ಮ ಮತ್ತೆ ಸಂಕುಚಿತಗೊಳ್ಳುತ್ತದೆ. ಹೀಗಾಗಿ ಇವುಗಳಿಗೆ ರೆಕ್ಕೆಗಳಿರುವುದು ಕಾಣಿಸಿವುದಿಲ್ಲ. ಜೊತೆಗೆ ಇವು ಸಾಮಾನ್ಯ ಓತಿಗಳಂತೆಯೇ ಕಾಣುತ್ತವೆ. ಆದರೆ ಕುತ್ತಿಗೆ ಭಾಗದಲ್ಲಿ ಒಂದು ಸಣ್ಣ ಆಕೃತಿಯ ಉದ್ದದ ಚರ್ಮ ವಿರುತ್ತದೆ. ಉಸಿರಾಡುವಾಗ ಅವು ಹಿಗ್ಗುವುದನ್ನು ಸಹ ನಾವು ನೋಡಬಹುದು.