ರೂಪಕ ಆನೆ, ಒಂಟಿಗಳ ಮೇಲೆ ಸೈನಿಕರೊಂದಿಗೆ ಮೆರವಣಿಗೆ
ಮಕ್ಕಳು ತೊಟ್ಟ ವಿವಿಧ ವೇಷಭೂಷಣ ಆಕರ್ಷಣೆ
yadgiri, ಶಹಾಪುರಃ ಇಲ್ಲಿನ ಗಂಗಾ ನಗರದಲ್ಲಿ ಬಲಭೀಮೇಶ್ವರ ಯುವಕ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪಿಸಲಾಗಿತ್ತು. ಹನ್ನೊಂದನೇಯ ದಿನವಾದ ಶನಿವಾರ ಸಂಜೆ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ಒಂಟೆಗಳ ಮೇಲೆ ಸೈನಿಕರ ವೇಷ ಧರಿಸಿದ ಮಕ್ಕಳು, ಮತ್ತು ಆನೆ ರೂಪಕದ ಮೇಲೆ ಭಾರತದ ಪರಂಪರೆ ಬಿಂಬಿಸುವ ಶ್ರೀರಾಮ, ಸೀತಾ ಮತ್ತು ಲಕ್ಷ್ಮಣ ಪಾತ್ರಧಾರಿ ಮಕ್ಕಳು ಆಸೀನರಾಗಿರುವದು ಗಮನ ಸೆಳೆಯಿತು.
ಅಲ್ಲದೆ ವಿಶೇಷವಾಗಿ ತೆಪ್ಪದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಪೋಷಾಕು ತೊಟ್ಟ ಮಗು ಆಕರ್ಷಣಿಯವಾಗಿತ್ತು. ಮೆರವಣಿಗೆ ಉದ್ದಕ್ಕೂ ಬ್ಯಾಂಜೋ, ವಿವಿಧ ವಾದ್ಯಗಳ ನಿನಾದಕ್ಕೆ ಮಕ್ಕಳು, ಯುವಕರ ಕುಣಿತ ಸಂಭ್ರಮ ಮನೆ ಮಾಡಿತ್ತು. ಸಂಭ್ರಮದ ಗಣೇಶ ವಿಸರ್ಜನೆಗೆ ಒಂದಿಷ್ಟು ಮಳೆ ಸಿಂಚನವಾದರೂ ಯುವಕರು ಉತ್ಸಾಹದಿಂದಲೇ ಹೆಜ್ಜೆ ಹಾಕಿದರು.