ಪ್ರಮುಖ ಸುದ್ದಿ
ಎಣಿಕೆ ಕೇಂದ್ರಕ್ಕೆ ಪಂಚ್, ಚಾಕು ತಂದಿದ್ದ ಯುವಕ ಪೊಲೀಸ್ ವಶಕ್ಕೆ
ಎಣಿಕೆ ಕೇಂದ್ರಕ್ಕೆ ಪಂಚ್, ಚಾಕು ತಂದಿದ್ದ ಯುವಕ ವಶಕ್ಕೆ
ಯಾದಗಿರಿಃ ಜಿಲ್ಲೆಯ ಶಹಾಪುರದ ಡಿಗ್ರಿ ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಕೇಂದ್ರಕ್ಕೆ ಚಾಕು ಮತ್ತು ಪಂಚ್ ತಂದಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ತಾಲೂಕಿನ ಸಗರ ಗ್ರಾಮದ ಮಹ್ಮದ್ ಅಶ್ಫಕ್ ಎಂಬ ಯುವಕನೇ ಪಂಚ್ ಹಾಗೂ ಚಾಕು ತೆಗೆದುಕೊಂಡು ಬಂದಿದ್ದ ಎನ್ನಲಾಗಿದೆ.
ಪೊಲೀಸರ ಪರಿಶೀಲನೆ ವೇಳೆ ಆತನ ಹತ್ತಿರವಿದ್ದ ಚಾಕು, ಪಂಚ್ ಸಿಕ್ಕಿರುವ ಕಾರಣ ಆತನನ್ನು ಪೊಲಿಸ್ ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.
ಮಹ್ಮದ್ ಅಶ್ಫಕ್ ಅವರ ತಾಯಿ ಸಗರ ಗ್ರಾಪಂ ವ್ಯಾಪ್ತಿ ಚುನಾವಣೆಗೆ ಸ್ಪರ್ಧಿಸಿದ್ದು, ಅಶ್ಫಕ್ ಎಣಿಕೆ ಕೇಂದ್ರಕ್ಕೆ ಏಜೆಂಟರಾಗಿ ಬಂದಿದ್ದ ಎನ್ನಲಾಗಿದೆ. ಈತ ಸಗರ ಗ್ರಾಮದ ಟಿಪ್ಪು ಸುಲ್ತಾನ ಸಂಘದ ಗ್ರಾಮ ಘಟಕ ಅಧ್ಯಕ್ಷ ಎಂದು ಹೇಳಲಾಗುತ್ತಿದೆ.
ಈ ಕುರಿತು ತನಿಖೆಕೈಗೊಂಡ ಸ್ಥಳೀಯ ಪೊಲೀಸರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.