ಗ್ರೀನ್ ಚಾಲೆಂಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಜೆಐ ನ್ಯಾ.ಎನ್.ವಿ.ರಮಣ
ಗ್ರೀನ್ ಚಾಲೆಂಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಜೆಐ ನ್ಯಾ.ಎನ್.ವಿ.ರಮಣ
ಹೈದ್ರಾಬಾದ್ಃ ಸಂಸದ ಜೋಗಿನಪಲ್ಲಿ ಸಂತೋಷಕುಮಾರ ಅವರು ನಗರದಲ್ಲಿ ಹಮ್ಮಿಕೊಂಡ ರಾಜ್ಯದಾದ್ಯಂತ ‘ಗ್ರೀನ್ ಚಾಲೆಂಜ್’ ಕಾರ್ಯಕ್ರಮವನ್ನು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಹಸೀರುಕರಣ ಮೂಲಕ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವ ಅಗತ್ಯವಿದೆ.
ಮುಂದೆ ವಿದ್ಯಾರ್ಥಿ ಜೀವನದಿಂದಲೇ ಸಸಿಗಳನ್ನು ನೆಟ್ಟು ಪೋಷಿಸಬೇಕೆಂಬ ನಿಯಮ ಜಾರಿಯಾದರೂ ಅಚ್ಚರಿ ಪಡಬೇಕಾಗಿಲ್ಲ.
ಮುಂದಿನ ದಿನಗಳಲ್ಲಿ ಗಿಡ ಮರಗಳನ್ನು ಬೆಳೆಸಿದವರಿಗೆ ಹಲವಾರು ರಿಯಾಯಿತಿ ರಿವಾಜು ನೀಡುವ ಕಾಲ ಬರಲಿದೆ. ಕಾರಣ ಎಲ್ಲರೂ ಈಗಿನಿಂದಲೇ ಗಿಡ ಮರಗಳ ಸರಂಕ್ಷಣೆಗೆ ಮುಂದಾಗಿ ಎಂದರು.
ಈ ಹಿಂದೆ ಗ್ರೀನ್ ಚಾಲೆಂಜ್ ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಪ್ರಧಾನಿ ಮೋದಿಯವರು ಶ್ಲಾಘಿಸಿದ್ದರು ಎಂದು ಸ್ಮರಿಸಿದರು.
ಇದೇ ವೇಳೆ ಸಂಸದ ಸಂತೋಷಕುಮಾರ “ವರ್ಷವೇದಂ” ಪುಸ್ತಕವನ್ನು ನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪ್ರಮುಖರು ಭಾಗವಹಿಸಿದ್ದರು.