ಬಾಯಿಗೆ ರುಚಿ ಕೊಡುವ ಗ್ರೀನ್ ಎಗ್ ಮಸಾಲಾ ಒಮ್ಮೆ ಟ್ರೈ ಮಾಡಿ ನೋಡಿ
ಬೇಕಾಗುವ ಪದಾರ್ಥಗಳು…
ಮೊಟ್ಟೆ- 4 (ಬೇಯಿಸಿದ್ದು)
ಶುಂಠಿ- ಸ್ವಲ್ಪ
ಬೆಳ್ಳುಳ್ಳಿ-ಸ್ವಲ್ಪ
ಗೋಡಂಬಿ- 10
ಹಸಿಮೆಣಸಿನ ಕಾಯಿ-4
ಮೊಸರು- 5 ಚಮಚ
ಪುದೀನಾ- ಸ್ವಲ್ಪ
ಕೊತ್ತಂಬರಿ – ಸ್ವಲ್ಪ
ಎಣ್ಣೆ- ಸ್ವಲ್ಪ
ಜೀರಿಗೆ- ಅರ್ಧ ಚಮಚ
ಕರಿಬೇವು-ಸ್ವಲ್ಪ
ಈರುಳ್ಳಿ- 1 (ಸಣ್ಣಗೆ ಕತ್ತರಿಸಿಕೊಂಡಿದ್ದು)
ದನಿಯಾ ಪುಡಿ- 1 ಚಮಚ
ಅಚ್ಚಖಾರದ ಪುಡಿ- ಅರ್ಧ ಚಮಚ
ಅರಿಶಿಣದ ಪುಡಿ- ಸ್ವಲ್ಪ
ಚಕ್ಕೆ/ಲವಂಗ ಪುಡಿ ಅಥವಾ ಗರಂ ಮಸಾಲಾ ಪುಡಿ- ಅರ್ಧ ಚಮಚ
ಕಾಳು ಮೆಣಸಿನ ಪುಡಿ- ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
ಮೊದಲಿಗೆ ಮಿಕ್ಸಿ ಜಾರ್’ಗೆ ಶುಂಠಿ, ಬೆಳ್ಳುಳ್ಳಿ, ಗೋಡಂಬಿ, ಹಸಿಮೆಣಸಿನ ಕಾಯಿ, ಮೊಸರು, ಪುದೀನಾ ಹಾಗೂ ಕೊತ್ತಂಬರಿ ಹಾಕಿ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ. ಕಾದ ನಂತರ ಜೀರಿಗೆ, ಕರಿಬೇವು ಹಾಗೂ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದೀಗ ರುಬ್ಬಿದ ಮಿಶ್ರಣವನ್ನು ಹಾಕಿ 10 ನಿಮಿಷ ಕೈಯಾಡಿಸಿ. ಇದೀಗ ದನಿಯಾ ಪುಡಿ, ಅಚ್ಚಖಾರದ ಪುಡಿ, ಅರಿಶಿಣದ ಪುಡಿ, ಚಕ್ಕೆ/ಲವಂಗ ಪುಡಿ ಅಥವಾ ಗರಂ ಮಸಾಲಾ ಪುಡಿ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ ಮಿಶ್ರಣ ಮಾಡಿ.
ಈ ಮಸಾಲೆ ಎಣ್ಣೆ ಬಿಟ್ಟುಕೊಳ್ಳುವವರೆಗೆ ಕೈಯಾಡಿಸುತ್ತಿರಿ. ಇದೀಗ ಮೊಟ್ಟೆಯನ್ನು ವೃತ್ತಾಕಾರದಲ್ಲಿ ಕತ್ತರಿಸಿಕೊಂಡು. ಇದನ್ನು ಮಸಾಲೆಗೆ ಸೇರಿಸಿ ಮಿಶ್ರಣ ಮಾಡಿ. 3- ನಿಮಿಷ ಮಸಾಲೆಯೊಂದಿಗೆ ಕುಡಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ಗ್ರೀನ್ ಎಗ್ ಮಸಾಲೆ ಸವಿಯಲು ಸಿದ್ಧ.