ಶಹಾಪುರಃ ಏ.10 ರವರೆಗೆ ಕಾಲುವೆಗೆ ನೀರು ಹರಿಸಲು ಗುರು ಪಾಟೀಲ್ ಮನವಿ
ಏ. 10 ರವರೆಗೆ ಕಾಲುವೆಗೆ ನೀರು ಹರಿಸಲು ಶಿರವಾಳ ಮನವಿ
ಶಹಾಪುರಃ ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯ ಜಮೀನುಗಳಿಗೆ ಏಪ್ರೀಲ್ 10 ರ ವರೆಗೂ ಕಾಲುವೆಗೆ ನೀರು ಹರಿಸಬೇಕು. ಸದ್ಯ ರೈತರು ಹಾಕಿದ್ದ ಭತ್ತದ ಬೆಳೆಗೆ ಏ.10ರವರೆಗೆ ನೀರು ಅಗತ್ಯವಿದ್ದು, ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮನವಿ ಮಾಡಿದ್ದಾರೆ.
ಭತ್ತದ ಬೆಳೆಗೆ ನೀರಿನ ಅಗತ್ಯವಿದ್ದು, ಕೂಡಲೇ ಈ ಕುರಿತು ಅಧಿಕಾರಿಗಳು ಪರಿಶೀಲಿಸಿ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ರೈತರದ್ದಾಗಲಿದೆ. ಈಗಲೇ ಕೊರೊನಾ ಹಾವಳಿಗೆ ರೈತಾಪಿ ಜನ ಬೇಸತ್ತು ಹೋಗಿದ್ದಾರೆ. ರೈತರ ಹಲವಾರು ಬೆಳೆಗೆ ಇನ್ನೂ ಹತ್ತು ದಿನದವರೆಗೂ ನೀರಿ ಅಗತ್ಯವಿದೆ.
ಸದ್ಯ ಉತ್ತಮ ಫಸಲಿದ್ದು, ಅದು ರೈತರ ಕೈಗೆಟುಕಬೇಕೆಂದಲ್ಲಿ ಇನ್ನೂ ಹತ್ತು ದಿನದವರೆಗೆ ಕಾಲುವೆಗೆ ನೀರು ಹರಿಸಬೇಕು. ಈ ಕುರಿತು ಸರ್ಕಾರ ಮುತುವರ್ಜಿವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಬೇಕು ಎಂದು ಅವರು ಎಚ್ಚರಿಸಿದ್ದಾರೆ. ಬೆಳೆ ರೈತರ ಕೈಗೆಟುಕಬೇಕಾದರೆ ಕೂಡಲೇ ಅಧಿಕಾರಿಗಲು ನೀರು ಹರಿಸುವ ಮೂಲಕ ಅನುಕೂಲ ಕಲ್ಪಿಸಬೇಕು.
ಪ್ರಸ್ತುತ ಬೆಳೆ ಹವಾಮಾನ ಅನುಗುಣವಾಗಿ ಬಾಡುತ್ತಿದೆ. ತಾಪಮಾನಕ್ಕೆ ಒಣಗುವ ಸಾಧ್ಯತೆ ಇದೆ. ನಾಲ್ಕಾರು ದಿನಗಳಲ್ಲಿಯೇ ಬೆಳೆ ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆ ಕಾರಣಕ್ಕೆ ಕೂಡಲೇ ಬೆಳೆಗಳಿಗೆ ಜೀವ ತುಂಬಲು ಈ ಭಾಗದ ಜೀವನಾಡಿ ಕೃಷ್ಣೆಯ ನೀರು ಕಾಲುವೆಗೆ ಹರಿಸಿದಲ್ಲಿ ಬೆಳೆಗಳಿಗೆ ಜೀವಕಳೆ ಬಂದು ರೈತಾಪಿ ಮೊಗದಲ್ಲೂ ಮಂದಹಾಸ ಮೂಡುವ ಕೆಲಸವಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.