ಕ್ಯಾಂಪಸ್ ಕಲರವಪ್ರಮುಖ ಸುದ್ದಿ

ಗೋಗಿಯಲ್ಲಿ ಗುರು ಸ್ಪಂಧನ ಕಾರ್ಯಕ್ರಮ, ಶಿಕ್ಷಕರಿಗೆ ಸೌಲಭ್ಯ ಕಲ್ಪಿಸುವ ಸುದಿನ

ಶಿಕ್ಷಕರಿದ್ದಲ್ಲಿಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ತಂಡ, ಸೌಲಭ್ಯ ಒದಗಿಸುವ ಸುದಿನ

ಶಹಾಪುರಃ ತಾಲೂಕಿನಲ್ಲಿ ಉತ್ತಮ ಶಿಕ್ಷಕರು ಬೋಧನ ಕಾರ್ಯದಲ್ಲಿ ಸಮರ್ಪಕವಾಗಿ ತೊಡಗಿದ್ದು, ಅವರಿಗೆ ದೊರೆಯಬೇಕಾದ ಕಾಲಮಿತಿ ಬಡ್ತಿ, ಗಳಿಕೆ ರಜೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಲು ಈ ಒಂದು ಗುರುಸ್ಪಂಧನ ಕಾರ್ಯಕ್ರಮ ವಲಯನಾಸಾರ ಹಾಕಿಕೊಂಡಿದ್ದು, ಈ ಕಾರ್ಯಕ್ರಮದ ಸದುಪಯೋಗವನ್ನು ಶಿಕ್ಷಕರು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ರುದ್ರಗೌಡ ಪಾಟೀಲ್ ತಿಳಿಸಿದರು.

ತಾಲೂಕಿನ ಗೋಗಿ ವಲಯದಲ್ಲಿ 6 ಕ್ಲಸ್ಟರ್‍ನ ಸುಮಾರು 300 ರಿಂದ 350 ಜನ ಶಿಕ್ಷಕರು ತಮ್ಮ ಸೇವಾ ಅವಧಿಯಲ್ಲಿ ದೊರೆಯಬೇಕಾದ ವಿವಿಧ ಸೌಲಭ್ಯಗಳನ್ನು ಒದಗಿಸುವ ಸದುದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಗುರು ಸ್ಪಂಧನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಿಕ್ಷಕರು ಸೇವಾವಧಿಯಲ್ಲಿ ಪಡೆಯಬೇಕಾದ ಸೌಲಭ್ಯ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದು, ಶಿಕ್ಷಕರಿಗೆ ಎಲ್ಲಾ ಸೌಲಭ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಗುರು ಸ್ಪಂಧನ ಕಾರ್ಯಕ್ರಮವನ್ನು ವಲಯಮಟ್ಟದಲ್ಲಿ ನೆರವೇರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಡಿಜಿಟಲ್ ಕಾರ್ಡ್ ಹಾಗೂ ಐಡಿ ಕಾರ್ಡ್ ವಿತರಿಸುವ ವ್ಯವಸ್ಥೆ ಮಾಡಲಾಗುವದು.

ಕರಾಪ್ರಾಶಾ ಶಿಕ್ಷಕರ ಸಂಘದ ಕಾರ್ಯದರ್ಶಿ ಲಕ್ಷ್ಮಣ ಲಾಳಸೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು ಆರು ವರ್ಷಗಳಿಂದ ಜರುಗದ ಗುರು ಸ್ಪಂಧನ ಕಾರ್ಯಕ್ರಮ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಳಜಿಯಿಂದ ಇಂದು ನಾಲ್ಕು ವಲಯಗಳಲ್ಲಿ ನಡೆಯುತ್ತಿದೆ. ಶಿಕ್ಷಕರು ಎಲ್ಲಾ ಸೌಲಭ್ಯಗಳನ್ನು ತಕ್ಷಣದಲ್ಲಿ ಪಡೆಯಲು ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಸಮನ್ವಯ ಅಧಿಕಾರಿ ರೇಣುಕಾ ಪಾಟೀಲ್, ಬಿಸಿ ಊಟ ಅಧಿಕಾರಿ ಸೂರ್ಯವಂಶಿ, ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಯಾಳಗಿ, ಜಿಲ್ಲಾ ಕಾರ್ಯದರ್ಶಿ ಜಗದೀಶ್ ಗೋಟ್ಲಾ, ಪದಾಧಿಕಾರಿಗಳಾದ ನಿಂಗಪ್ಪ ಅಂಗಡಿ, ಕಾವೇರಿ ಪಾಟೀಲ್, ಚಂದಪ್ಪಾ ಹೆಚ್.ಎಸ್.ಹನುಮಂತಪ್ಪ ಮತ್ತು ಆರು ಕ್ಲಸ್ಟ್‍ರಿನ ಸಿ.ಆರ್.ಪಿ.ಗಳು ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಾರ್ಯಲಯದ ಎಲ್ಲಾ ಸಿಬ್ಬಂದಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button