ಅತ್ಯಾಚಾರ ಪ್ರಕರಣಃ ಗೃಹ ಸಚಿವ ನೀಡಿದ ಹ್ಯಾಟ್ರಿಕ್ ಹೇಳಿಕೆಗೆ ಜನಾಕ್ರೋಶ
ಅತ್ಯಾಚಾರ ಪ್ರಕರಣಃ ಗೃಹ ಸಚಿವರು ಹೇಳಿದ್ದೇನು.?
ಮೈಸೂರಃ ಚಾಮುಂಡಿ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿಯೋರ್ವಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕುರಿತು, ಗೃಹಸಚಿವರು, ಮೊದಲನೆದಾಗಿ ಸಂಜೆ ಹೊತ್ತಲ್ಲಿ ಅಲ್ಲಿಗೆ ಹೋಗಬಾರದಿತ್ತು ಎಂಬ ಹೇಳಿಕೆ ನೀಡುವ ಮೂಲಕ ರಾಜ್ಯದ ಮಹಿಳೆಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.
ಸಂಜೆ ಆದ ಮೇಲೆ ಮಹಿಳೆಯರು, ಯುವತಿಯರು ಹೊರಗಡೆಯೇ ಬರಬಾರದೇ ಇದು ಕರ್ನಾಟಕವೋ ತಾಲಿಬಾನಿ ವಶ ಪಡಿಸಿಕೊಂಡಿರೋ ಅಫ್ಘಾನಿಸ್ತಾನವೋ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷ ನಾಯಕರಿಂದಲೂ ಖಂಡನಿಯ ವ್ಯಕ್ತವಾಗುತ್ತಿದ್ದಂತೆ, ಖಾಸಗಿ ವಾಹಿನಿಗೆ ಫೋನಾಯಿಸಿ ನಾನು ಹಾಗಲ್ಲ ಹೇಳಿದ್ದು ತಮಾಷೆಗೆ ಹೇಳಿದೆ ಎನ್ನುವ ಮೂಲಕ ಮತ್ತೊಂದು ಅವಘಡ ಹೇಳಿಕೆ ನೀಡಿದ್ದು,
ಮೂರನೇಯದಾಗಿ ಕಾಂಗ್ರೆಸ್ ನಾಯಕರು ಇವರ ಹೇಳಿಕೆ ಕುರಿತು ಕಿಡಿಕಾರಿರುವ ಬಗ್ಗೆ, ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೇಸ್ಸಿಗರು, ನನ್ನ ರೇಪ್ ಮಾಡ್ತಿದ್ದಾರೆ ಎಂದು ಹೇಳುವ ಮೂಲಕ ಮೂರು ಹೇಳಿಕೆಗಳು ಅರೆಜ್ಞಾನ ಹೊಂದಿದವರಂತೆ ನೀಡಿದ್ದು, ಅವರ ಸ್ಥಾನಮಾನ ಪ್ರಶ್ನೆ ಮಾಡುವಂತಾಗಿದೆ.
ಹೀಗಾಗಿ ಬಿಜೆಪಿಗೆ ಇದು ಮುಜುಗರ ತಂದೊಡ್ಡಿದೆ ಎನ್ನಲಾಗಿದೆ. ತಮ್ಮ ಹೇಳಿಕೆಗೆ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಗೃಹ ಸಚಿವರು ತಕ್ಷಣ ತಮ್ಮ ಹೇಳಿಕೆ ವಾಪಸ್ ಪಡೆಯುವುದಾಗಿ ಮಾಧ್ಯಮಗಳಿಗೆ ತಿಳಿಸಿರುವದು ಸದ್ಯ ಸಮಾಧಾನ ತಂದಿದೆ ಎನ್ನಬಹುದು.