ಸೇಂದಿ ಮಾರಾಟ ಸ್ಥಗಿತದಿಂದ ಈಡಿಗ ಸಮುದಾಯ ಅತಂತ್ರ – ಪ್ರಣವಾನಂದ ಸ್ವಾಮೀಜಿ
ಈಡಿಗ ಸಮಾಜಕ್ಕೆ ಅನ್ಯಾಯ: ಜೂ.20 ರಂದು ಉಪವಾಸ ಸತ್ಯಾಗ್ರಹ
ಈಡಿಗ ಸಮಾಜಕ್ಕೆ ಅನ್ಯಾಯ: ಉಪವಾಸ ಸತ್ಯಾಗ್ರಹ
ಸೇಂದಿ ಮಾರಾಟ ಸ್ಥಗಿತದಿಂದ ಈಡಿಗ ಸಮುದಾಯ ಅತಂತ್ರ
yadgiri, ಶಹಾಪುರ: ಈಡಿಗ ಸಮುದಾಯದ ಕುಲಕಸುಬು ಸೇಂದಿ ಮಾರಾಟ ಹಾಗೂ ಉಳಿಸುವುದನ್ನು ಸ್ಥಗಿತಗೊಳಿಸಿದ್ದರಿಂದ ಸಮುದಾಯದ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಸೇಂದಿ ಪುನರಾರಂಭಗೊಳಿಸಲಾಗುವುದು ಎಂದು ವಚನ ನೀಡಿದ ಸರ್ಕಾರ ಈಗ ಮರೆತು ಬಿಟ್ಟಿದೆ. ವಚನ ಭ್ರಷ್ಟ ಸರ್ಕಾರವನ್ನು ಎಚ್ಚರಿಸಲು ಸೋಮವಾರ ಜೂ.20 ರಂದು ಕಲ್ಬುರ್ಗಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾ ಮಂಡಳಿಯ ರಾಷ್ಟ್ರೀಯ ಘಟಕದ ಅದ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದಲ್ಲಿ ಈಡಿಗ ಸಮುದಾಯದ ಶಾಸಕರು, ಸಚಿವರು ಇದ್ದಾರೆ. ಸಮುದಾಯದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಅಧಿಕಾರದ ಬೆನ್ನು ಹತ್ತಿದ್ದಾರೆ. ಇತರ ಸಮಾಜಗಳ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಆದರೆ ಈಡಿಗ ಸಮುದಾಯದ ನಿಗಮ ಸ್ಥಾಪಿಸದೆ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಹಿಂದುಳಿದ ಈಡಿಗ, ಬಿಲ್ಲವ, ನಾಮದಾರಿ, ಪೂಜಾರಿ ಸೇರಿದಂತೆ 27 ಉಪ ಪಂಗಡಗಳು ಸೇರಿದಂತೆ 70ಲಕ್ಷ ಜನಸಂಖ್ಯೆಯನ್ನು ಹೊಂದಿದ್ದೇವೆ. ಸಂಘಟಿತರಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಹರ್ಷಿ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ 500 ಕೋಟಿ ರೂ. ಅನುದಾನ ಕಲ್ಪಿಸಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಹೋರಾಟ ಸಮಿತಿಯ ಉಪಾಧ್ಯಕ್ಷ ವೆಂಕಟೇಶ, ಆರ್ಯ ಈಡಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಯ್ಯ ಗುತ್ತೆದಾರ, ಹುಸನಯ್ಯ ಗುತ್ತೆದಾರ ಇದ್ದರು.