BREAKING ಸಹ ಶಿಕ್ಷಕರ ನೇಮಕಾತಿ ಅಕ್ರಮ ಸರ್ಕಾರಕ್ಕೆ ಸಿಐಡಿ ಬರೆದ ಪತ್ರದಲ್ಲೇನಿದೆ.?
ಸಹ ಶಿಕ್ಷಕರ ಅಕ್ರಮ ನೇಮಕಾತಿ ಸಿಐಡಿ ಪತ್ರ
2013 ರಿಂದ 2016 ವರೆಗಿನ ಸಹ ಶಿಕ್ಷಕರ ನೇಮಕದಲ್ಲಿ ಅಕ್ರಮ, ಶಿಕ್ಷಕರ ನೇಮಕ ರದ್ದತಿಗೆ ಸಿಐಡಿ ಪತ್ರ
ಸಹ ಶಿಕ್ಷಕರ ನೇಮಕಾತಿ ಅಕ್ರಮ ಸಿಐಡಿ ಪತ್ರ.?
ವಿವಿ ಡೆಸ್ಕ್ಃ 2013-14 ಮತ್ತು 2014-15 ಮತ್ತು 2015-16 ರಲ್ಲಿ ಸರ್ಕಾರದಿಂದ ಸಹ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿರುವದು ಇದೀಗ ತನಿಖೆಯಿಂದ ಬಯಲಾಗಿದ್ದು, ಈ ಕುರಿತು ಸಿಐಡಿ ಸರ್ಕಾರಕ್ಕೆ ಪತ್ರ ಬರೆದ ಘಟನೆ ನಡೆದಿದೆ.
ಸಿಐಡಿ ಬರೆದ ಪತ್ರದಲ್ಲೇನಿದೆ.?
ಅಕ್ರಮ ಸಹ ಶಿಕ್ಷಕರ ನೇಮಕಾತಿ ಕುರಿತು ಸಮಗ್ರ ತನಿಖೆ ನಡೆಸಿದ ಸಿಐಡಿ ತಂಡ ಈಗಾಗಲೇ 2013 ರಿಂದ 2016 ರವರೆಗೆ ನಡೆದ ಶಿಕ್ಷಕರ ನೇಕಾಮಕಾತಿಯಲ್ಲಿ ಅಕ್ರಮ ವಾಸನೆ ಜಾಸ್ತಿ ಇದ್ದು, ಯರ್ಯಾರು ಅಕ್ರಮವಾಗಿ ಸಹ ಶಿಕ್ಷಕರಾಗಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರ ಮೇಲೆ ಸಿಐಡಿ ಕಣ್ಣು ಹಾಯಿಸಿದ್ದು, ಅಕ್ರಮ ಬಯಲಿಗೆಳೆದಿದ್ದು, ಕೂಡಲೇ ಈ ಮೇಲೆ ತಿಳಿಸಿದ ವರ್ಷದಲ್ಲಿ ನೇಮಕಗೊಂಡ ಸಹ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸೂಚಿಸಿದೆ ಎನ್ನಲಾಗಿದೆ.
ಅಲ್ಲದೆ ಸರ್ಕಾರ ಈ ಕೂಡಲೇ ಅಕ್ರಮವಾಗಿ ನೇಮಕಗೊಂಡ ಶಿಕ್ಷಕರ ಸೇವೆ ಸ್ಥಗಿತಗೊಳಿಸುವ ಮೂಲಕ ಸೂಕ್ತ ಕ್ರಮಕೈಗೊಳ್ಳಲು ಸಹಕರಿಸುವಂತೆ ಉಲ್ಲೇಖಿಸಿದೆ ಎನ್ನಲಾಗಿದೆ.
ಕಾಂಗ್ರೆಸ್ ಅವಧಿಯಲ್ಲಿ ಈ ನೇಮಕಾತಿ ನಡೆದಿದೆ ಎನ್ನಲಾಗಿದ್ದು, ಇದು ಲೋಕಾಯುಕ್ತ ಕದ ತಟ್ಟಲಿದೆ ಎಂಬುದು ರಾಜಕೀಯ ತಜ್ಞರ ಲೆಕ್ಕಾಚಾರ ನಡೆದಿದೆ ಎನ್ನಬಹುದು.