ಪ್ರಮುಖ ಸುದ್ದಿ

ಪಕ್ಷ ನಿಷ್ಟನಾದ ನನಗೆ ಬಿಜೆಪಿಯಿಂದ ಅನ್ಯಾಯ – ಶೆಟ್ಡರ್

ಪಕ್ಷದಿಂದ ಹೊರಹಾಕುವ ಷಡ್ಯಂತರ ನಡೆದಿದೆ

ಪಕ್ಷ ನಿಷ್ಟನಾದ ನನಗೆ ಬಿಜೆಪಿಯಿಂದ ಅನ್ಯಾಯ – ಶೆಟ್ಡರ್

ಪಕ್ಷದಿಂದ ಹೊರಹಾಕುವ ಷಡ್ಯಂತರ ನಡೆದಿದೆ

ವಿವಿ ಡೆಸ್ಕ್ಃ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಪಕ್ಷ ನಿಷ್ಡನಾಗಿ, ಯಾವೊಂದು ಕಪ್ಪು ಚುಕ್ಕೆ ಇರದ ನನಗೆ ಟಿಕೆಟ್ ನೀಡದೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಜಗಧೀಶ ಶೆಟ್ಡರ್ ದೂರಿದರು.

ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿ ಅವರು ಮಾಧ್ಯಮ ಮುಂದೆ ತಮ್ಮ ಮನದಾಳದ ಮಾತನ್ನು ಹೊರ ಹಾಕಿದರು.
ಈ ಸಲ ಗೆದ್ದರೆ ಬಿಜೆಪಿ ಯಲ್ಲಿಯೇ ನಾನು ಹಿರಿಯ ಶಾಸಕನಾಗಿರುತ್ತಿದ್ದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಾನು ಎಲ್ಲಿ ಅಧಿಕಾರ ಕೇಳಿ ಬಿಡ್ತಿನೇನು ಎಂಬ ಆತಂಕದಿಂದ ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯಾದಿಯಾಗಿ ಬಿಜೆಪಿ ಹಿರಿಯ ನಾಯಕರಾರಿಗೂ ರಾಜ್ಯದ ಸ್ಥಿತಿ ಗೊತ್ತಿಲ್ಲ ಅನಿಸುತ್ತೆ. ಸಮೀಕ್ಷೆಗೆ ಆಗಮಿಸಿದವರನ್ನೆ ಖರೀದಿ ಮಾಡಿರುವ ಮಾತು ಕೇಳಿ ಬರುತ್ತಿದೆ. ಸತ್ಯಾಂಶ ವರದಿ ಕೊಡುವಲ್ಲಿ ಅವರು ಎಡವಿದ್ದಾರೆ. ರಾಜ್ಯದ ಕೆಲವರು ಮಾತ್ರ ಬಿಜೆಪಿ ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಕೊಳ್ಳುವ ತಂತ್ರಗಾರಿಕೆ ನಡೆಸಿದ್ದಾರೆ ಎಂದ ಅವರು, ಬಿಜೆಪಿ ಆಡಳಿತಕ್ಕೆ ಬಂದರೆ ಶೆಟ್ಟರ್ ಮತ್ತೆ ಶಾಸಕರಾದಲ್ಲಿ ಲಿಂಗಾಯತ ಸಮುದಾಯದಲ್ಲಿ ಬಿಎಸ್ ವೈ ಬಿಟ್ರೆ ನಾನೇ ಹಿರಿಯ ಎಲ್ಲಿ ಸಿಎಂ ಸ್ಥಾನಕ್ಕೆ ಮುಳುವಾಗ್ತಾರೋ ಎಂಬ ಕಾರಣಕ್ಕೆ‌‌ ಕುತಂತ್ರ ನಡೆದಿರಬಹುದು ಎಂದು ಆರೋಪಿಸಿದರು.

ರಾಜ್ಯದ ಬೆಳವಣಿಗೆ ಚುನಾವಣೆ ಸ್ಥಿತಿಗತಿ, ಟಿಕೆಟ್ ಕೊಡುವಲ್ಲಿ ಎಡವಟ್ಟು ಕುರಿತು ಬಿಜೆಪಿಯ  ವರಿಷ್ಟರ ಗಮನಕ್ಕೆ ಬಂದಿರುವದಿಲ್ಲ ಎಂಬ ಮಾತು ವ್ಯಕ್ತಪಡಿಸಿದರು. ಹಿರಿಯ ನಾಯಕನಾದ ನನ್ನನ್ನೆ ಕಡಗಣನೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನ್ನ ರಾಜಕೀಯ ಜೀವನ ಮುಗಿಸಬೇಕೆಂದು ತಂತ್ರ ನಡೆಸಿದವರಿಗೆ ಕಾಂಗ್ರೆಸ್ ಸೇರುವ ಮೂಲಕ ಎದುರೇಟು ನೀಡಿರುವೆ. ಮನಸಾಕ್ಷಿಯಾಗಿ ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಸೇರ್ಪಢಯಾಗಿರುವೆ ಎಂದು ಸ್ಪಷ್ಟ ಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button