ಪ್ರಮುಖ ಸುದ್ದಿ

ಕಾಂಗ್ರೆಸ್ಸಿಗರದು ಭಯೋತ್ಪಾದಕರ ಪರ ನಿಲುವು ಬಹಿರಂಗ – ಸಿಎಂ ಬೊಮ್ಮಾಯಿ

ಉಗ್ರರ ಪರ ಡಿಕೆಶಿ ಹೇಳಿಕೆ - ಬಿಜೆಪಿ ಆಕ್ರೋಶ

ಕಾಂಗ್ರೆಸ್ಸಿಗರದು ಭಯೋತ್ಪಾದಕರ ಪರ ನಿಲುವು ಬಹಿರಂಗ – ಸಿಎಂ ಬೊಮ್ಮಾಯಿ

ಮಂಡ್ಯಃ ಕಾಂಗ್ರೆಸ್ ಪಕ್ಷದ ಅಧ್ಯಕ್ಷರೇ ಮೊನ್ನೆ ಕುಕ್ಕರ್ ಬಾಂಬ್ ಸಿಡಿಸಿದ‌ ಉಗ್ರ ಆರೋಪಿ ಶಾರೀಕ್ ಅನ್ನ ಬೇಯಿಸಲು ಕುಕ್ಕರ್ ಒಯ್ಯತ್ತಿದ್ದ ಎನ್ನುವ ಮೂಲಕ ತಮ್ಮ ಪಕ್ಷದ ಭಯೋತ್ಪಾದಕರ ಪರ‌ ನಿಲುವನ್ನು ಬಹಿರಂಗ ಪಡಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.

ಜಿಲ್ಲೆಯ ಪಾಂಡವಪುರದಲ್ಲಿ ಬಿಜೆಪಿಯಿಂದ ನಡೆದ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಸ್ಲಿಂ ಮತಬ್ಯಾಂಕ್ ಸೃಷ್ಟಿಸಿಕೊಳ್ಳುವ ತವಕದಲ್ಲಿ‌ ದೇಶದ ಹಿತವನ್ನೆ ಮರೆಯುವ‌ ನಾಯಕರಿಗೂ ಅವರ ಪಕ್ಷಕ್ಕೆ‌ ಜನ‌ ತಕ್ಕ ಪಾಠ ಕಲಿಸಲಿದ್ದಾರೆ.

ಕೆಪಿಸಿಸಿ ಪಕ್ಷದ ಅಧ್ಯಕ್ಷ ಭಯೋತ್ಪಾದಕರಿಗೆ ಬೆಂಬಲ ಕೊಡುವ ಮಾತನಾಡುವದು ಅವರದೊಂದು ತಂತ್ರ‌ಹೀಗೆ ಮಾತಾಡಿದೆ ಮುಸ್ಲಿಂ ಮತಗಳು ಬರುತ್ತವೆ ಎಂಬುದು ಅವರ ಯೋಚನೆ. ಆದರೆ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಲಿ ಸೋನಿಯಾ ಗಾಂಧಿ,‌ ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಪರವಾಗಿದ್ದಾರಾ.? ಅಥವಾ ಉಗ್ರರ ಪರ ನಿಲುವು ಹೊಂದಿದ್ದಾರಾ.? ಎಂಬುದು ಸ್ಪಷ್ಟ ಪಡಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ ಪೊಲೀಸರು ಸಮಗ್ರ ತನಿಖೆ ನಡೆಸಿಯೇ ಶಾರೀಕ್ ಗೆ ಉಗ್ರ ಸಂಪರ್ಕ ಇರುವದು ಸ್ಪಷ್ಟ ಪಡಿಸಿರುವದು ಈಗಾಗಲೇ ಗೊತ್ತಿದೆ. ಜನರೇ ಅವರಿಗೆ ಪಾಠ ಕಲಿಸಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button