ಪ್ರಮುಖ ಸುದ್ದಿ
BREAKING ಮನಸ್ಸು ಮಾಡಿದ್ರೆ ಸಿಎಂ ಆಗುವೆ – ಜನಾರ್ಧನ ರಡ್ಡಿ
ನನಗೆ ಕೊಡಬಾರದ ಕಷ್ಟ ಕೊಟ್ರೂ - ಜನಾರ್ಧನ ರಡ್ಡಿ

ಮನಸ್ಸು ಮಾಡಿದ್ರೆ ಸಿಎಂ ಆಗುವೆ – ಜನಾರ್ಧನ ರಡ್ಡಿ
ನನಗೆ ಕೊಡಬಾರದ ಕಷ್ಟ ಕೊಟ್ರೂ – ಜನಾರ್ಧನ ರಡ್ಡಿ
ಬಳ್ಳಾರಿಃ ನಾನು ಮನಸ್ಸು ಮಾಡಿದ್ದಲ್ಲಿ ಯಾವಾಗ ಬೇಕಾದರೂ ಸಿಎಂ ಆಗುತ್ತೇನೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರಡ್ಡಿ ತಿಳಿಸಿದರು.
ನಗರದಲ್ಲಿ ಸಹೋದರ ಶಾಸಕ ಸೋಮಶೇಖರ್ ರಡ್ಡಿ ಜನ್ಮ ದಿನಾಚರಣೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜಕೀಯದಲ್ಲಿ ನನಗೆ ಕೊಡಬಾರದಷ್ಟು ಕಷ್ಟ ಕೊಟ್ರೂ ಆದರೆ ಅವೆಲ್ಲವುಗಳನ್ನು ಎದುರಿಸಿ ನಾನು ನಿಮ್ಮ ಮುಂದೆ ನಿಂತಿದ್ದೇನೆ. ಇದಕ್ಕೆಲ್ಲ ತಾಯಿ ಕನಕ ದುರ್ಗಮ್ಮಳ ಆಶೀರ್ವಾದವೇ ಕಾರಣ. ನನಗೆ ಕೊಟ್ಟ ಕಷ್ಟ ಬೇರೆಯವರಾಗಿದ್ದರೆ ತಾಳಲಾಗದು. ಅಷ್ಟೊಂದು ಅನುಭವಿಸಿದ್ದೇನೆ.
ಅಲ್ಲದೆ ರಡ್ಡಿ-ಶ್ರೀರಾಮುಲು ಸಹೋದರರಿಗೆ ಹಣದ ಅವಶ್ಯಕತೆ ಇಲ್ಲ.ಅಲ್ಲದೆ ನನಗೆ ಶಾಸಕ, ಮಂತ್ರಿಯಾಗಬೇಕೆಂಬ ಆಸೆಯು ನನಗಿಲ್ಲ ಎಂದು ತಮ್ಮ ಅನುಭವ ರಾಜಕೀಯ ಷಡ್ಯಂತ್ರ, ಕುತಂತ್ರ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು ಗಣ್ಯರು ಹಾಜರಿದ್ದರು.