ಸಂಸ್ಕೃತಿ

ಕಷ್ಟಸುಖ ಅನುಭವದ ಆರಂಭ ಪಾಠವೇ ಸಿಹಿಕಹಿ

ಪತಂಜಲಿಃ ಸಾಮೂಹಿಕವಾಗಿ ಬೇವು ಸೇವನೆ

ಯಾದಗಿರಿಃ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ಪ್ರತಿ ವರ್ಷ ಯುಗಾದಿ ಬರುತ್ತದೆ. ವರ್ಷ ಕಳೆಯುತ್ತೇವೆ ಮತ್ತೆ ಯುಗಾದಿ ಬರುತ್ತದೆ. ಯುಗಾದಿ ಹಬ್ಬ ನಮ್ಮ ದೇಶದಲ್ಲಿ ಆಚರಿಸುವ ಎಲ್ಲಾ ಹಬ್ಬಗಳ ರಾಜ. ಪ್ರಕೃತಿ, ನಿಸರ್ಗದಲ್ಲಿ ಚಿಗುರೊಡೆದು ಹೂ ಕಾಯಿ ಹಸಿರೆಲೆಯೊಂದಿಗೆ ಇಡಿ ವಾತಾವರಣವನ್ನು ಪವಿತ್ರವಾಗಿರುವ ಪಕ್ವ ಕಾಲ ಎಂದು ಶಿಕ್ಷಕ ಲಕ್ಷ್ಮಣ ಲಾಳಸೇರಿ ಹೇಳಿದರು.

ಜಿಲ್ಲೆಯ ಶಹಾಪುರ ನಗರದ ಫಕೀರೇಶ್ವರ ಮಠದ ಬಯಲು ಬಸವ ಮಂಟಪದಲ್ಲಿ ಯುಗಾದಿ ಹಬ್ಬದಂಗವಾಗಿ ಸ್ಥಳೀಯ ಪತಂಜಲಿ ಸಹಯೋಗದೊಂದಿಗೆ ನಡೆದ ಬೇವು-ಬೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತೀಯರಿಗೆ ಯುಗಾದಿಯೇ ಹೊಸ ವರ್ಷ. ಹೊಸ ವರ್ಷದ ಮೊದಲ ದಿನವಾದ್ದರಿಂದ ಸಿಹಿಕಹಿಗಳ ಅನುಭವ ಪಡೆಯಲು. ಒಬ್ಬರಿಂದೊಬ್ಬರಿಗೆ ಹಂಚಿಕೊಳ್ಳಲು ಬೇವುಬೆಲ್ಲದ ಆಚರಣೆಯನ್ನು ತಂದಿದ್ದಾರೆ. ಯುಗಾದಿಯಂದು ಹೊಸ ಹುರುಪು, ನೂತನ ಚೈತನ್ಯವುಂಟಾಗುವ ಹಾಗೇ ಬೇರೆ ಯಾವ ಹಬ್ಬಗಳಲ್ಲಿಯೂ ಉಂಟಾಗುವುದಿಲ್ಲ.

ಕಾರಣ ಪ್ರಕೃತಿ ಒಡಲಲ್ಲೂ ನವಚೇತನ ತುಂಬಿರುತ್ತದೆ. ಹಸಿರೆಲೆ ಚಿಗರೊಡೆದು ಹೂ ಕಾಯಿ ಬಿಟ್ಟು ಗಾಳೀಗೆ ಮೈತೂಗುತ್ತಿರುವ ಮಾವು ಬೇವಿನ ಗಿಡಗಳ ಸೊಬಗು ಬಲು ಅಂದವಾಗಿರುತ್ತದೆ. ಅದರಿಂದ ವೈಜ್ಞಾನಿಕವಾಗಿ ಮಾನವರಿಗೆ ಸಾಕಷ್ಟು ಆರೋಗ್ಯಕರ ಲಾಭಗಳುಂಟು.
ಆ ಕಾರಣಕ್ಕೆ ಅಂದು ಬೇವು ಬೆಲ್ಲ ಸೇರಿಸಿ, ವಿವಿಧ ಹಣ್ಣು ಹಂಪಲು ಮೂಲಕ ಬೇವು ತಯಾರಿಸಲಾಗುತ್ತದೆ. ಇದನ್ನು ಸೇವಿಸುವದರಿಂದ ಮಾನವರ ದೇಹದಲ್ಲಿ ಅಗಾಧ ನವಶಕ್ತಿ ತುಂಬಲಿದೆ.

ಭಾರತೀಯ ಸಂಸ್ಕೃತಿ  ಇಡಿ ಜಗತ್ತಿಗೆ ಮಾರ್ಗದರ್ಶಕವಾಗಿ, ನಡುವೆ ಬಂದ ಪರಕೀಯರ ಸಂಸ್ಕೃತಿಗೆ  ಮಾರು ಹೋಗಿ ಹಲವರು ನಮ್ಮ ದೇಶದ ಸಂಸ್ಕಾರ, ಸಂಸ್ಕೃತಿ ಪರಂಪರೆ ಮಹತ್ವ ಮರೆತು ಮೂಢರಾಗಿದ್ದಾರೆ. ಕಷ್ಟಸುಖದ ಅನುಭವವಿಲ್ಲದವನು ಮಾನವನೆನಿಸಿಕೊಳ್ಳಲಾರ. ಆ ಅನುಭವದ ಆರಂಭ ಪಾಠವೇ ಸಿಹಿಕಹಿಯಾದ ಬೇವು ಬೆಲ್ಲದ ಹಂಚಿಕೆ. ಇಂತಹ ಮಹತ್ವ ದಿನದಂದು ಸಾಮೂಹಿಕವಾಗಿ ಬೇವು ಸೇವನೆಗೆ ಅವಕಾಶ ಕಲ್ಪಿಸಿ, ಭಾರತೀಯ ಸಂಸ್ಕೃತಿ  ಸಂಸ್ಕಾರ ಅರ್ಥಪೂರ್ಣವಾಗಿ ಪರಿಚಯಿಸಿಲು ವೇದಿಕೆ ಕಲ್ಪಿಸಿದ ಪತಂಜಲಿ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.

ಶ್ರೀಮಠದ ಗುರುಪಾದ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ವೇದಿಕೆ ಮೇಲೆ ಬಳ್ಳಾರಿ ಪತಂಜಲಿ ಸಹಯೋಗದ ನಟರಾಜ, ಸ್ಥಳೀಯ ಅನಾಥಾಧ್ರಮದ ಸೋಮಣ್ಣ ಸೇರಿದಂತೆ ಇತರರಿದ್ದರು. ಶ್ರೀಮಠದಲ್ಲಿ ನಿತ್ಯ ನಡೆಯುವ ಉಚಿತ ಯೋಗ ಶಿಬಿರದ ಜಗಧೀಶ ಹೊನ್ಕಲ್, ನಿಂಗಣ್ಣ ವಿಭೂತಿಹಳ್ಳಿ, ಗುರು ಮಣಿಕಂಠ, ಅರವಿಂದ ಉಪ್ಪಿನ್, ಮಲ್ಲಿಕಾರ್ಜುನ ಆಲೂರ ಸೇರಿದಂತೆ ಇತರರು ಭಾಗವಹಿಸಿದ್ದರು. ಪತಂಜಲಿ ಯೋಗದ ಬಸವರಾಜ ಕಡಗಂಚಿ ನಿರೂಪಿಸಿ, ವಂದಿಸಿದರು. ಮಾತೆಯರು ಸಹೋದರ ಸಹೋದರಿಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಮೂಹಿಕವಾಗಿ ಬೇವು ಸೇವನೆ ಮಾಡಲಾಯಿತು.

Related Articles

Leave a Reply

Your email address will not be published. Required fields are marked *

Back to top button