ಸಡಗರ ಕಾಣದ ಜೋಡು ಪಲ್ಲಕ್ಕಿ ಉತ್ಸವಃ ಕೊರೊನಾ ಎಫೆಕ್ಟ್
ಶಹಾಪುರಃ ಜೋಡು ಪಲ್ಲಕ್ಕಿ ಉತ್ಸವ ಸಂಕ್ಷಿಪ್ತ
ಶಹಾಪುರಃ ಕೊರೊನಾ ಹಾವಳಿಯಿಂದಾಗಿ ಈ ಬಾರಿ ಮಕರ ಸಂಕ್ರಮಣ ಅಂಗವಾಗಿ ನಗರದಲ್ಲಿ ನಡೆಯುವ ಸಗರನಾಡಿನ ಆರಾಧ್ಯದೈವರಾದ ಭೀಮರಾಯನ ಗುಡಿಯ ಬಲಭೀಮೇಶ್ವರ ಹಾಗೂ ದಿಗ್ಗಿಯ ಸಂಗಮೇಶ್ವರ ಪಲ್ಲಕ್ಕಿ ಉತ್ಸವ ಸರಳವಾಗಿ ಮೆರವಣಿಗೆ ನಡೆಯುತ್ತಿರುವದು ಕಂಡು ಬಂದಿತು.
ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುವ ಜೋಡು ಪಲ್ಲಕ್ಕಿ ಉತ್ಸವ ಈ ಬಾರಿ ಕೋವಿಡ್-19 ಹಿನ್ನೆಲೆ ಕೊರೊನಾ ನಿಯಮಾವಳಿ ಪಾಲನೆಯಡಿ ಜರುಗಿತು.
ಭಕ್ತರ ಸಂಖ್ಯೆ ಇಳಿಮುಖವಾಗಿರುವದು ಕಂಡು ಬಂದಿತು. ಜನರು ಮಾಸ್ಕ್, ದರಿಸಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮುರ್ತಿಯ ದರ್ಶನವನ್ನು ಸಾಲಾಗಿ ನಿಂತು ಪಡೆದರು. ಸಿಡಿಮದ್ದು, ದಿವಟಿಗೆ ಮತ್ತು ಬಲಭೀಮೇಶ್ವರರ ಮಾಲಾವ್ರತಾಧಾರಿಗಳ ಭಜನಾ ಎಲ್ಲವು ಈ ಬಾರಿ ಕಂಡು ಬರಲಿಲ್ಲ.
ಒಟ್ಟಾರೆ ಈ ಬಾರಿ ಕೊರೊನಾ ಹಿನ್ನೆಲೆ ಜೋಡು ಪಲ್ಲಕ್ಕಿ ಉತ್ಸವ ಮೆರವಣಿಗೆ ಸಾಂಪ್ರಾದಾಯಿಕ ವಾಗಿ ಸರಳವಾಗಿ ಆಚರಿಸಲಾಯಿತು. ವಿವಿಧ ವಾಧ್ಯ ಮೇಳಗಳ ಸಂಖ್ಯೆಯು ವಿರಳವಾಗಿತ್ತು. ಅಲ್ಲಲ್ಲಿ ಪೊಲೀಸರು ಜನರನ್ನು ಚದುರಿಸುತ್ತಿರುವದು ಕಂಡು ಬಂದಿತು.
ಈಗಾಗಲೇ ನಗರದ ಮಾರುತಿ ಮಂದಿರದ ಸನ್ನಿಧಿಯಲ್ಲಿ ಬಲಭೀಮೇಶ್ವರ ಪಲ್ಲಕ್ಕಿ ಬಂದಿದ್ದು, ಭಕ್ತಾಧಿಗಳು ಸಾಲಾಗಿ ದರ್ಶನ ಪಡೆಯುತ್ತಿದ್ದಾರೆ. ದಿಗ್ಗಿ ಸಂಗಮೇಶ್ವರರ ಪಲ್ಲಕ್ಕಿ ಹಳಿಸಗರದಲ್ಲಿದ್ದು, ಇನ್ನೂ ಅರ್ಧ ತಾಸಿನಲ್ಲಿ ಬರಲಿದೆ ಎಂದು ಭಕ್ತಾಧಿಗಳು ತಿಳಿಸಿದ್ದಾರೆ.