ದಡ್ಡರ ಗುಂಪಿನ ನಾಯಕಿಯಾದವಳು ಯಾರು..?
‘ಹಿಂದಿರುಗಿದಾಗ’ ಪಾಟೀಲರ ಕಾದಂಬರಿ ಸರಣಿ-5
ನಮ್ಮೊಳಗಿನ ಒಡಲಲಿ ಮೂಡಿತೊಂದು ‘ಕಾವ್ಯ’
“ ಗಲ್ಲು ಗಲ್ಲೆನ್ನುತ ಬಾ ಗೆಳತಿ
ಮಲ್ಲಿಗೆ ಹೂವುಗಳ ಸುರಿಯುವೆ ನಾ
ಮೆಲ್ಲ ಮೆಲ್ಲನೆ ಬಾ ಗೆಳತಿ
ನಿನ್ನ ಕಾಲಡಿ ಗರಿಕೆ ಹುಲ್ಲಾಗಿ ಚಿಗುರುವೆ ನಾ ”
ಇದುವರೆಗೂ ಚುಕ್ಕಿಗಳ ಬಾನಂಗಳವಾಗಿದ್ದ ನಮ್ಮೂರ ಶಾಲೆಯು, ಇಂದು ಚಂದ್ರಮಖಿ ಆಗಮನದಿಂದ ಹುಣ್ಣಿಮೆ ಬಾನಂಗಳದಂತೆ ಕಂಗೊಳಿಸಿತು. ತರಗತಿಗೆ ವರ್ಗ ಶಿಕ್ಷಕರು ಬಂದು ಹಾಜರಿ ಓದತೊಡಗಿದರು. ಶಿಕ್ಷಕರು ಹೆಸರುಗಳನ್ನು ಹೇಳಿದಂತೆ ನನ್ನ ಸಹಪಾಠಿಗಳು ಎದ್ದು ನಿಂತು ‘ಎಸ್ಸಾರ್’ ಎಂದು ಸುಮಧುರ ಕಂಠ ಉಲಿಯಿತು. ಅವಳ ಹೆಸರು ಕಾವ್ಯ, ಆ ದನಿಯಲ್ಲಿ ಎಂಥ ಆಕರ್ಷಣೆ, ಆ ದೇವರು ಎಷ್ಟು ಕ್ರೂರಿ, ಸಾವಿರ ಕೋಗಿಲೆಗಳ ಕೊರಳ ಇಂಚರವನ್ನು ಕಸಿದು ಚಲುವೆಗೆ ನೀಡಿದ್ದಾನೆ. ಅವಳ ಸೌಂದರ್ಯ ಇಂಪಾದ ದನಿಗೆ ನಾನು ನನ್ನನ್ನೆ ಮರೆತು ಎಲ್ಲಿಯೋ ತೇಲಿ ಹೋದೆ, ಒಂದು ವೇಳೆ ಕವಿಯಾಗಲು ಬಯಿಸಿದರೆ, ಸಾಹಿತ್ಯ ಓದುವ ಅವಶ್ಯಕತೆಯಿಲ್ಲ. ಈ ಚೆಲುವನ್ನು ಕಂಡರೆ ಸಾಕು ಕಾವ್ಯ ತನ್ನಿಂದ ತಾನೆ ಹುಟ್ಟುತ್ತದೆ. ಅವಳ ಹೆಸರು ಕಾವ್ಯ ಅವಳ ಹೆಸರಲ್ಲೇ ಸಾಹಿತ್ಯ ಅಡಗಿದೆ.
“ಮಿಂಚಿನ ಕಣ್ಣೋಳೆ
ಇಂಚರದ ದನಿಯೋಳೆ
ಕುಂಚಕ್ಕೆ ನಿಲುಕದ ಕಲ್ಪನೆಯ ಕಾವ್ಯ ನೀನು
ಆ ಕಲ್ಪನೆಗೆ ಮನಸೋತ ಜೀವವನೆ ನಾನು”
ಕಾವ್ಯ ಶಾಲೆಯಲ್ಲಿ ಓದು ಬರಹದಲ್ಲಿ ಮೊದಲ ಸ್ಥಾನ ಅಲಂಕರಿಸಿದಳು. ಕೊನೆಯ ಬೆಂಚಿನಲ್ಲಿ ಕುಳಿತ ಪಂಡಿತ ಶೀಖಾಮಣಿಗಳಿಗೆ ಎದೆ ಸೀಳಿದರೂ ಎರಡಕ್ಷರವಿಲ್ಲ. ತರಗತಿಯಲ್ಲಿ ಅವಳು ಮುಗಿಲು ನಾವುಗಳು ನೆಲ. ಉಳಿದ ವಿದ್ಯಾರ್ಥಿಗಳು ಸ್ವಲ್ಪ ಮಟ್ಟಿಗೆ ಜಾಣರಾಗಿದ್ದರು. ಮದ್ಯಾಹ್ನ ತರಗತಿಯ ಮಗ್ಗಿಯ ಸುಗ್ಗಿಯಲ್ಲಿ ಐದು ಜನ ಗೆಳೆಯರಿಗೂ ಕಪಾಳ ಮೋಕ್ಷಗಳು ಕಟ್ಟಿದ್ದ ಬುತ್ತಿ. ನಮ್ಮ ಮುಖಗಳು ಕಪಳ ಮೋಕ್ಷಗಳಿಂದ ನೆತ್ತರ ಬಣ್ಣಕ್ಕೆ ತಿರುಗುತ್ತಿದ್ದವು. ಚೆಲುವೆ ಮುಂದೆ ನಮಗೆ ತುಂಬಾ ಅವಮಾನವಾಗುತಿತ್ತು.
ಓದು ನಮ್ಮ ತಲೆಗೆ ಇಳಿಯುತ್ತಿರಲಿಲ್ಲ. ಆದರೂ ಶಾಲೆಯಲ್ಲಿ ದೊರೆಯುವ ಶೀಕ್ಷಯ ನೋವಿನಲ್ಲೂ, ಚೆಲುವೆಯನ್ನು ನೋಡುತ್ತಾ ನೋವು ಮರೆತು ನಗುತ್ತಿದ್ದೇವು. ಶಾಲೆಯಲ್ಲಿ ಪ್ರಯೊಬ್ಬ ವಿದ್ಯಾರ್ಥಿಯು ಉತ್ತಮ ಬಟ್ಟೆಗಳನ್ನು ಧರಿಸಿ, ಶಿಸ್ತಿನ ಸಿಪಾಯಿಯಂತೆ ಕಾಣುತಿದ್ದರು. ನಮ್ಮ ಗುಂಪಿನರವ ಮನೆಯವರು ಯಾರು ಅಷ್ಟೊಂದು ಸ್ಥಿತಿವಂತರಲ್ಲ. ಬಡತನವನ್ನು ಹಾಸಿ ಹೊದ್ದುಕೊಂಡವರು. ನಮ್ಮಬಟ್ಟೆಗಳು ಸರಿಯಾಗಿ ಇಲ್ಲದೆ, ಸೈನಿಕರ ಗುಂಪಿನಲ್ಲಿ ಉಗ್ರಗಾಮಿಗಳಂತೆ ಎದ್ದು ಕಾಣುತ್ತಿದ್ದೆವು.
ಶಾಲೆಯಲ್ಲಿ ಜಾಣ ವಿದ್ಯಾರ್ಥಿನಿರಿದ್ದರು, ಜಾಣ ವಿದ್ಯಾರ್ಥಿಗಳಿದ್ದರು, ಕಾವ್ಯ ಇವರ ಸ್ನೇಹವನ್ನು ಬೆಳೆಸಿದರು. ಅಷ್ಟಕಷ್ಟೆ. ಆದರೆ ನಮ್ಮ ಐದು ಜನರ ಗುಂಪಿನಲ್ಲಿ ಆರನೇಯವಳಾಗಿ ಬೆರೆತು ಬಿಟ್ಟಳು.
ನಮಗೂ ಆಶ್ಚರ್ಯವಾಯಿತು. ಶಾಲೆಯಲ್ಲಿ ಇಷ್ಟೊಂದು ಜಾಣಜಾಣೆಯರಿರುವಾಗ, ಈ ದಡ್ಡರ ಗುಂಪಿನ ನಾಯಕಿ ಏಕಾದಳೋ. ಏನೋ ನಮ್ಮ ಹಿಂದಿನ ಜನ್ಮದ ಸ್ನೇಹಿತೆಯಾಗಿರಬೇಕು. ಕಾವ್ಯ ಊರಿಗೆ ಬಂದಾಗಿನಿಂದ ನಮ್ಮ ಗುಂಪು, ರವಿ ಇಲ್ಲದ ಹಗಲು, ಚಂದ್ರನಿಲ್ಲದ ಹುಣ್ಣಿಮೆಯ ಮುಗಿಲಾಗಿತ್ತು. ದೇವತೆ ನಮ್ಮಲ್ಲಿ ಬೆರೆತು ಬೆಳಕಾದಳು.
ದಿನಾಲು ಶಾಲೆಗೆ ಬರುವಾಗ ನಮ್ಮ ಗುಂಪಿನವರ ಜೇಬಿನಲ್ಲಿ ನೇರಳೆ ಹಣಣು, ಕವಳೆ ಹಣ್ಣು ಇಲ್ಲವೆ ಹುರಿದ ಹುಣಸೆ ಬೀಜ ಯಾವುದಾದರೊಂದು ತಿನ್ನುವ ಪದಾರ್ಥ ತುಂಬಿರುತಿತ್ತು. ನಮ್ಮಿಂದ ಕಾವ್ಯ ತಿನ್ನಲು ಪಡೆದುಕೊಂಡಾಗ…(ಮುಂದುವರೆಯುವುದು.)
ಶರಣಗೌಡ ಪೋ.ಪಾಟೀಲ್, ಚಂದಾಪುರ
ಲೇಖಕರು
ಲೇಖಕರನ್ನು ಸಂಪರ್ಕಿಸಲು ದಯವಿಟ್ಟು ದೂರವಾಣಿ ಸಂಖ್ಯೆ ನಮೂದಿಸಿ ಸರ್,
ಕಾದಂಬರಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ . ನಯವಾದ ವಿನಯವಾಣಿ ನಯನಗಳ ತಂಪಾಗಿಸಿ , ಎದೆ ಇಂಪಾಗಿಸಲಿ , ನಮಸ್ಕಾರಗಳೊಂದಿಗೆ
Channgide
ತಮ್ಮ ದೂರವಾಣಿ ತಿಳಿಸಿ ಸರ್.