ಪ್ರಮುಖ ಸುದ್ದಿ
ಹಿಂಗಾರು ಹಂಗಾಮಿಗೆ ಡಿ.8 ರಿಂದ ಕಾಲುವೆಗೆ ನೀರು, ಪೂರ್ವ ಸಿದ್ಧತೆಗೆ ರಾಜೂಗೌಡ ಮನವಿ
ಹಿಂಗಾರು ಹಂಗಾಮಿಗೆ ಡಿ.8 ರಿಂದ ಕಾಲುವೆಗೆ ನೀರು, ಪೂರ್ವ ಸಿದ್ಧತೆಗೆ ರಾಜೂಗೌಡ ಮನವಿ
ವಿವಿ ಡೆಸ್ಕ್ಃ ಹಿಂಗಾರು ಹಂಗಾಮಿ ಬೆಳೆಗಳಿಗೆ ಅನುಕೂಲವಾಗುವಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಕಾಲುವೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ರೈತರು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸುರಪುರ ಶಾಸಕ ರಾಜೂಗೌಡ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಡಿ.8 ರಿಂದ ನೀರು ಬಿಡಲು ಆರಂಭಗೊಂಡು ಡಿ.17 ರವರೆಗೆ ಕಾಲುವೆಗೆ ನೀರು ಹರಿಯಲಿದೆ. 14 ದಿನ ನೀರು ಬಿಡುವದು ಮತ್ತು 10 ದಿನ ಬಂದ್ ಮಾಡಲಾಗುವದು ಈ ರೀತಿಯ ನಿಗದಿಯಂತೆ ನೀರು ಹರಿಸಲು ತೀರ್ಮಾನಿಸಲಾಗಿದ್ದು, ರೈತರೂ ಕೂಡಲೇ ಜಮೀನನ್ನು ಹದ ಗೊಳಿಸಿಕೊಳ್ಳುವ ಮೂಲಕ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಕಳಕಳಿಯ ಮನವಿಯನ್ನು ಮಾಡಿಕೊಂಡಿದ್ದಾರೆ.
ವಿಡಿಯೋ ಮೂಲಕವು ರೈತರಲ್ಲಿ ಮನವಿ ಮಾಡಿಕೊಂಡಿರುವ ರಾಜೂಗೌಡರು ವಿಡಿಯೋ ತುಣಕನ್ನು ಎಲ್ಲಡೆ ಸಾಮಾಜಿಕ ಜಾಲತಾಣದ ಮೂಲಕ ರೈತರಿಗೆ ಮಾಹಿತಿ ಜೊತೆಗೆ ಸಲಹೆ ನೀಡಿದ್ದಾರೆ.