Home
ನಾಡೋಜ ಕವಿ ಚನ್ನವೀರ ಕಣವಿ ಕಣ್ಮರೆ

ನಾಡೋಜ ಕವಿ ಚನ್ನವೀರ ಕಣವಿ ವಿಧಿವಶ
ಧಾರವಾಡಃ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಾಡೋಜ ಕವಿ ಚನ್ನವೀರ ಕಣವಿ (93) ಚಿಕಿತ್ಸೆಗಾಗಿ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.
ಕಣವಿ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳಲ್ಲಿ ಇವರೊಬ್ಬರಾಗಿದ್ದರು. ಕಣವಿ ಕನ್ನಡದ ಸಮನ್ವಯ ಕವಿ. ಸಾಹಿತ್ಯ ಕ್ಷೇತ್ರದಲ್ಲಿ ಇವರದು ಅಪಾರ ಕೊಡುಗೆ ಇದೆ.
ಕನ್ನಡ ಸಾಹಿತ್ಯದ ದೃವತಾರೆ ಇಂದು ನಮ್ಮಲ್ಲೆನ್ನರ ಅಗಲಿದ್ದು, ಕನ್ನಡ ನಾಡಿಗೆ, ಸಾಹಿತ್ಯಕ್ಕೆ ಅಪಾರ ನಷ್ಟ ತಂದಿದೆ. ಕವಿ ಕಣವಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ವಿವಿ ಬಳಗ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತದೆ.