ಪ್ರಮುಖ ಸುದ್ದಿ
ವಾಟ್ ನಾನ್ಸೆನ್ಸ್ ಯು ಆರ್ ಸ್ಪೀಕಿಂಗ್ ಮಿಸ್ಟರ್ ರಾಮಲಿಂಗಾರೆಡ್ಡಿ.?
ಕಲಬುರ್ಗಿಃ ಸತ್ತವರೆಲ್ಲಾ ಬಿಜೆಪಿಯವರು ಎಂಬುದಾಗಿ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾರೆ ಎಂದಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಸಂಸದ ಪ್ರಹ್ಲಾದ ಜೋಶಿ ಕಲಬುರಗಿಯಲ್ಲಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜೋಶಿ ವಾಟ್ ಏ ನಾನ್ಸೆನ್ಸ್ ಯು ಆರ್ ಸ್ಪೀಕಿಂಗ್ ಮಿಸ್ಟರ್ ರಾಮಲಿಂಗಾರೆಡ್ಡಿ.? ಎಂದು ಕೇಳುವ ಮೂಲಕ ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಸಂಸದ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ರಾಮಲಿಂಗಾರೆಡ್ಡಿಯವರೇ ಗಲ್ಲಿ ನಾಯಕರ ಥರ ಮಾತಾಡಬೇಡಿ. ನೀವೊಬ್ಬರು ರಾಜ್ಯದ ಗೃಹ ಸಚಿವರು ಎಂಬುದು ನೆನಪಿರಲಿ ಎಂದಿದ್ದಾರೆ. ರಾಹುಲ್ ಗಾಂಧಿ ಕೊಡುವ ಸರ್ಟಿಫಿಕೇಟ್ ನಮಗೆ ಬೇಕಾಗಿಲ್ಲ. ಅವರೊಬ್ಬ ಪಾಟ್೯ ಟೈಮ್ ರಾಜಕಾರಣಿ, ರಾಗಾ ಬಗ್ಗೆ ಸಿರಿಯಸ್ಸಾಗಿ ತಗೋಳೊ ಅವಶ್ಯಕತೆಯಿಲ್ಲ ಎಂದು ಹರಿಹಾಯ್ದಿದ್ದಾರೆ.