ಪ್ರಮುಖ ಸುದ್ದಿಸಾಹಿತ್ಯ

ಡಿಜಿಟಲ್ ಮಾಧ್ಯಮ ಜನರೇ ಕಟ್ಟುತ್ತಿರುವ ವಿಭಿನ್ನ ಮಾಧ್ಯಮ – ವಿಶ್ವರಾಧ್ಯ

ಜನದನಿಯೇ ಮುಖ್ಯವಾಹಿನಿ ವಿಶೇಷ ಕಾರ್ಯಕ್ರಮ

ಜನರದನಿ ಮುಖ್ಯವಾಹಿನಿಗೆ ಬರಲು ಮಾಧ್ಯಮ ಪಾತ್ರ ಬಹುಮುಖ್ಯ-ಆನೇಗುಂದಿ

yadgiri, ಶಹಾಪುರಃ ಜನರ ದನಿ ಮುಖ್ಯವಾಹಿನಿಗೆ ತರಲು ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ ಹೇಳಿದರು.

ನಗರದ ಕಸಾಪ ಭವನದಲ್ಲಿ ತಾಕಸಾಪ, ದಲಿತ ಸಂಘರ್ಷ ಸಮಿತಿ ಹಾಗೂ ಮಾಸ್ ಮೀಡಿಯಾ ಫೌಂಡೇಷನ್ ಬೆಂಗಳೂರ ಸಂಯುಕ್ತಾಶ್ರಯದಲ್ಲಿ ನಡೆದ ಜನದನಿಯೇ ಮುಖ್ಯವಾಹಿನಿ ಶೀರ್ಷಿಕೆಯಡಿ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಎಂದಿಗಿಂತಲೂ ಹೆಚ್ಚು ಸವಾಲುಗಳು ಎದುರಿಸುತ್ತಿದೆ. ಜನರ ದನಿಯನ್ನು ಅಡಗಿಸಲು ಸರ್ಕಾರಗಳು ಏನೆಲ್ಲ ಕಸರತ್ತು ನಡೆಸುತ್ತಿವೆ. ಇಂತಹ ದುರಂತ ಕಾಲದಲ್ಲಿ ನಾವೆಲ್ಲರೂ ಎಚ್ಚೆತ್ತುಕೊಂಡು ಒಕ್ಕೊರಲ ಧ್ವನಿಯಾಗಿ ಪ್ರತಿರೋಧಿಸುವದು ಅಗತ್ಯವಿದೆ ಎಂದರು.

ಪ್ರಗತಿಪರ ಚಿಂತಕ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿ ಮಾಧ್ಯಮಗಳಿಗೆ ವಿಶೇಷ ಸ್ಥಾನಮಾನವಿದೆ. ಆದರೆ ಇತ್ತೀಚಿನ ಬಹುತೇಕ ಮಾಧ್ಯಮದ ವ್ಯವಸ್ಥೆ ಕಂಡಾಗ ಅಚ್ಚರಿಯಾಗುತ್ತದೆ. ಸರ್ಕಾರದ ಪರವಾಗಿಯೇ ಕಾರ್ಯನಿರ್ವಹಿಸುತ್ತಿರುವ ಪ್ರತ್ರಿಕೋಧ್ಯಮದ ಘನತೆ, ಕರ್ತವ್ಯ ಮರೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜನದನಿಯೇ ಮುಖ್ಯವಾಹಿನಿ ಎನ್ನುವ ಧ್ಯೇಯದೊಂದಿಗೆ ಹೊರಬರುತ್ತಿರುವ ಡಿಜಿಟಲ್ ಮಾಧ್ಯಮ ಜನರೇ ಕಟ್ಟುತ್ತಿರುವ ವಿಭಿನ್ನ ಮಾಧ್ಯಮವಾಗಿದೆ, ಜನರ ದನಿಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇದು ಸಮರ್ಪಕವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.

ಕಲ್ಬುರ್ಗಿಯ ಬಾಲಾಜಿ ಕುಂಬಾರ ಪ್ರಾಸ್ತವಿಕವಾಗಿ ಮಾತನಾಡಿದರು. ದಲಿತ ಮುಖಂಡ ನೀಲಕಂಠ ಬಡಿಗೇರ, ಕೃಷಿ ಕಾರ್ಮಿಕ ಸಂಘದ ದಾವಲ್‍ಸಾಬ ನದಾಫ್ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ, ಸಾಯಬಣ್ಣ ಪುರ್ಲೆ, ಬಸವರಾಜ ಗುಡಿಮನಿ, ಮೌನೇಶ ಹಳಿಸಗರ, ಸುಭಾಷ ಹೋತಪೇಠ, ಶಿವಣ್ಣ ಇಜೇರಿ, ದೇವಿಂದ್ರಪ್ಪ ಕನ್ಯಾಕೋಳೂರ, ಶರಣು ದೋರನಹಳ್ಳಿ, ಚಂದ್ರಕಾಂತ ರಸ್ತಾಪುರ, ಮೋಹನ್ ಕುಮಾರ ಹೊಸ್ಮನಿ, ನಿಂಗಣ್ಣ ತಿಪ್ಪನಳ್ಳಿ, ಡಾ.ಬಸವರಾಜ ಇಜೇರಿ, ನಾಗಣ್ಣ ಬಡಿಗೇರಿ, ಮಲ್ಲಿಕಾರ್ಜುನ ಪೂಜಾರಿ, ರಾಯಪ್ಪ ಗಂಗನಾಳ, ಬಂದೇನವಾಜ್, ನಾಗರಾಜ ದೇಸಾಯಿ, ಬಸವಲಿಂಗಪ್ಪ ಶಿರವಾಳ, ಮೌಲಾಲಿ ಹಳಿಸಗರ ಇದ್ದರು. ರಾಘವೇಂದ್ರ ಹಾರಣಗೇರ ಸ್ವಾಗತಿಸಿದರು. ಮರೆಪ್ಪ ಜಾಲಿಮಂಚಿ ನಿರೂಪಿಸಿದರು. ವಿಶ್ವ ನಾಟೇಕಾರ ವಂದಿಸಿದರು.

 

Related Articles

Leave a Reply

Your email address will not be published. Required fields are marked *

Back to top button