ಉಮೇಶ ಕತ್ತಿ ಉಡಾಫೆ ಮಾತು – ಜನಾಕ್ರೋಶ
ಉಮೇಶ ಕತ್ತಿ ಉಡಾಫೆ ಮಾತು – ಜನಾಕ್ರೋಶ
ವಿವಿ ಡೆಸ್ಕ್ಃ ಆಹಾರ ಸಚಿವರಾದ ಉಮೇಶ ಕತ್ತಿ ರೈತನೋರ್ವ ಕರೆ ಮಾಡಿ 5 kg ಬದಲು 2 kg ಅಕ್ಕಿ ಹಾಕ್ತಿದ್ದಾರೆ ಸರ್ ನಾವೇನ್ ಬದುಕೋದಾ ಸಾಯೋದಾ ಅಂತ ಕೇಳಿದ್ದಕ್ಕೆ ಕತ್ತಿ ಸಾಯಿರಿ ಎಂದು ಹೇಳುವ ಮೂಲಕ ಜನಾಕ್ರೋಶಕ್ಕೆ ಕಾರಣರಾಗಿದ್ದಾರೆ.
ಸಚಿವರೊಬ್ಬರು ರೈತ ಕೇಳಿದ ಪ್ರಶ್ನೆಗೆ ಸಾಯೋದೆ ಒಳ್ಳೆಯದು ಸಾಯಿರಿ ಎನ್ನುವ ಮಾತು ರಾಜ್ಯದಾದ್ಯಂತ ಅವರ ಹೇಳಿಕೆಗೆ ಖಂಡನೆ ವ್ಯಕ್ತವಾಗುತ್ತಿದೆ.
ಅಲ್ದೆ ಮಾಜಿ ಸಿಎಂ ಎಚ್ಡಿಕೆ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಅವರು ಕತ್ತಿಯವರು ಬೇಜವಬ್ದಾರಿ ಹೇಳಿಕೆ ನೀಡಿದ್ದು ಅವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸುವ ಮೂಲಕ ಇಂತಹ ನಾಲಾಯಕ್ ಮಂತ್ರಿಗೆ ಪಾಠ ಕಲಿಸಬೇಕು ಎಂದು ಅವರು ಸಿಎಂ ಅವರಿಗೆ ಮನವಿ ಮಾಡಿದ್ದಾರೆ.
ಸಚಿವ ಸಂಪುಟದಲ್ಲಿ ಇಂತಹ ಧಿಮಾಕಿನ ಮಾತಾಡುವವರನ್ನು ಇಟ್ಕೊಂಡೆ ಸರ್ಕಾರ ಬೆಲೆತೆತ್ತಬೇಕಾಗಿದೆ. ಜನರ ಕಷ್ಟ, ನೋವಿಗೆ ಸ್ಪಂಧಿಸಬೇಕು. ಅದು ಬಿಟ್ಟು ಮನಸ್ಸಿಗೆ ಬಂದಂತೆ ಮಾತಾಡೋದು ಎಷ್ಟರ ಮಟ್ಟಿಗೆ ಸರಿ ಎಂದು ಜನ ಮಾಧ್ಯಮಕ್ಕೆ ಕರೆ ಮಾಡಿ ಬಾಯಿಗೆ ಬಂದಂತೆ ಛಿ..ಥೂ.. ಎಂದು ಉಗಿಯುತ್ತಿದ್ದಾರೆ.
ಮಂತ್ರಿ ಕತ್ತಿ ಯಂತವರಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರ್ತಾ ಇರೋದು. ಇವರನ್ನ ಕೂಡಲೇ ಸಂಪುಟದಿಂದ ಹೊರಹಾಕಬೇಕು ಎಂಬ ಕೂಗು ಜಾಸ್ತಿಯಾಗುತ್ತಿದೆ. ಈ ಕುರಿತು ಸರ್ಕಾರ, ಸಿಎಂ ಯಾವ ನಿರ್ಧಾರಕೈಗೊಳ್ಳಲಾಗುತ್ತೋ ಕಾದು ನೋಡಬೇಕು.