ಯಾದಗಿರಿ ಜನತೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗೃತೆವಹಿಸಿ- ಸಚಿವ ಸುಧಾಕರ
ಯಾದಗಿರಿ ಜನತೆ ಆತಂಕಪಡುವ ಅಗತ್ಯವಿಲ್ಲ, ಮುಂಜಾಗೃತೆವಹಿಸಿ- ಸುಧಾಕರ
ಯಾದಗಿರಿಃ ಜಿಲ್ಲೆಯಲ್ಲಿ ಅತ್ಯಧಿಕ ಜನರಿಗೆ ಸೋಂಕು ಕಾಣಿಸಿಕೊಂಡರು ರೋಗದ ಲಕ್ಷಣಗಳು ಕಂಡು ಬಾರದ ಹಿನ್ನೆಲೆ ಜನತೆ ಯಾವುದೇ ಭಯ ಆತಂಕಕ್ಕೆ ಒಳಪಡುವ ಅಗತ್ಯವಿಲ್ಲ. ಸಮುದಾಯಕ್ಕೆ ಇನ್ನು ಹರಡಿರುವದಿಲ್ಲ. ಮಹಾರಾಷ್ಟ್ರ ದಿಂದ ಬಂದವರಲ್ಲಿಯೇ ಸೋಂಕು ಕಂಡು ಬರುತ್ತಿದೆ. ನಾಗರಿಕರು ಮುಂಜಾಗೃತ ವಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ 735 ಜನ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಯಾರೊಬ್ಬರಲ್ಲು ರೋಗದ ಲಕ್ಷಣಗಳು ಕಂಡು ಬರುತ್ತಿಲ್ಲ.
ಇದೇ ವೇಳೆ ಯಾದಗಿರಿ ಜಿಲ್ಲೆಯ ಸೊಂಕು ಪರೀಕ್ಷಾ ವರದಿಗಳು ವಿಳಂಬವಾಗುತ್ತಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಜಿಲ್ಲಾಧಿಕಾರಿಗಳು ಗಮನಕ್ಕೆ ತಂದಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, 24 ಅಥವಾ 36 ಗಂಟೆಯೊಳಗೆ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದ ಅವರು,
ಲಾಕ್ ಡೌನ್ ಮುಂದುವರಿಕೆ ವಿಚಾರ ಕುರಿತು, ಈಗಾಗಲೇ ಲಾಕ್ ಡೌನ್ ಗೊಳಿಸಿದ್ದರಿಂದಲೇ ಸಾಕಷ್ಟು ಜನರ ಜೀವ ಉಳಿದಂತಾಗಿದೆ. ಪ್ರಸ್ತುತ ಜೀವದ ಜೊತೆಗೆ ಜೀವನ ಸಹಜ ಸ್ಥಿತಿಗೆ ಬರಬೇಕಿದೆ. ಹೀಗಾಗಿ ಎಲ್ಲರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಸಿ ಕೊರೊನಾ ವಿರುದ್ಧ ಎಚ್ವರಿಕೆಯ ಹೋರಾಟ ನಡೆಸಬೇಕಷ್ಟೆ ಎಂದರು.
ಈ ಸಂದರ್ಭದಲ್ಲಿ ಸಂಸದ ಉಮೇಶ ಜಾಧವ್ಶಾ, ಶಾಸಕ ವೆಂಕಟರಡ್ಡಿ ಮುದ್ನಾಳ, ಶರಣಬಸಪ್ಪಗೌಡ ದರ್ಶನಾಪುರ ಇದ್ದರು.