ಪ್ರಮುಖ ಸುದ್ದಿ

ಕೆಲ ಮತಾಂಧ ಮುಸ್ಲಿಂರಿಂದ ಗಲಭೆ: ಸಚಿವ‌ ಕೆ.ಎಸ್.ಈಶ್ವರಪ್ಪ

ಧರ್ಮದ ಹೆಸರಲ್ಲಿ ಕಾಂಗ್ರೇಸ್ ರಾಜಕೀಯ ಈಶ್ವರಪ್ಪ ಆಕ್ರೋಶ

ಧರ್ಮದ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ ಮಾಡುವರು ಪಾಕಿಸ್ತಾನಕ್ಕೆ ಹೋಗಬೇಕಿತ್ತು…!

ಕೆಲ ಮತಾಂಧ ಮುಸ್ಲಿಂರಿಂದ ಗಲಭೆ: ಸಚಿವ‌ ಕೆ.ಎಸ್.ಈಶ್ವರಪ್ಪ

ಯಾದಗಿರಿಃ ಕಾಂಗ್ರೆಸ್ ನಾಯಕರ ವಿರುದ್ಧ ಯಾದಗಿರಿಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ನಾಲಿಗೆ ಹರಿಬಿಟ್ಟು ವಿವಾದಾತ್ಮಕ ಹೇಳಿಕೆ ನೀಡಿದ ಘಟನೆ ನಡೆದಿದೆ.

ನಗರದಲ್ಲಿ ಸುದ್ದಿಗೋಷ್ಠಿನ ಉದ್ದೇಶಿಸಿ ಮಾತನಾಡಿದ ಅವರು,
ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಕಾಂಗ್ರೆಸ್ ವಿಸರ್ಜನೆ ಆಗುತ್ತಿದೆ ಎಂದು ದೂರಿದ ಅವರು,

ಕಾಂಗ್ರೆಸ್ ನವರು ಹಿಂದು, ಮುಸ್ಲಿಂ , ಕ್ರಿಶ್ಚಿಯನ್ ಅಂತ ಧರ್ಮ ಒಡೆದು ಆಳುವ ಕೆಲಸ ಮಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವದಿದ್ದರೆ ಪಾಕಿಸ್ತಾನಕ್ಕೆ ಹೋಗಬೇಕಿತ್ತು ಎಂದು ಕಾಂಗ್ರೆಸ್ ವಿರುದ್ಧ ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದರು.

ದೇಶದ ಕೆಲ ಮತಾಂಧ ಮುಸಲ್ಮಾನರು ಗಲಭೆ, ಗೂಂಡಾಗಿರಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇಂತಹ ಭಯೋತ್ಪಾದಕ, ಗುಂಡಾಗಿರಿ, ಮತಾಂಧ ಮುಸ್ಲಿಂರಿಗೆ ಕಾಂಗ್ರೆಸ್ ಬೆಂಬಲ ಕೊಟ್ಟಿದೆ. ಇದರಿಂದ ದೇಶದಲ್ಲಿ ಕಾಂಗ್ರೆಸ್ ನಿರ್ಣಾಮವಾಗುತ್ತಿದೆ.

ನಾಲ್ಕು ರಾಜ್ಯಗಳ ಫಲಿತಾಂಶದಂತೆ ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ನಾಯಕರು ಹೇಳಿದಂತೆ ನಡೆದುಕೊಳ್ಳುತ್ತೆನೆ..!

ರಾಜ್ಯದಲ್ಲಿ ಸಚಿವ ಸಂಪುಟ ಪುನರರಚನೆ ವಿಚಾರ ಕುರಿತು ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು,‌ನನಗೆ ಅದರ ಬಗ್ಗೆ ಗೊತ್ತಿಲ್ಲ. ಪಕ್ಷದಲ್ಲಿ ನಾವೆಲ್ಲ ಕಾರ್ಯಕರ್ತರು, ಕಾರ್ಯಕರ್ತರನ್ನು ಮಂತ್ರಿ ಮಾಡಬಹುದು. ಸಿಎಂ ಮಾಡಬಹುದು ಇದೆಲ್ಲ ಚುನಾವಣೆಯ ಯುದ್ದದ ರಣತಂತ್ರವಾಗಿದೆ.

ಶ್ರೀಕೃಷ್ಣನ ಯುದ್ದದ ರಣತಂತ್ರವನ್ನೇ ಬಿಜೆಪಿ ರಣತಂತ್ರ ಎಣೆದಿದ್ದು, ಮುಂದಿನ‌ ವಿಧಾನಸಭೆ ಚುನಾವಣೆ ಸುಲಭವಾಗಿ ಎದುರಿಸುತ್ತೇವೆ. ನಾನು ಮಂತ್ರಿ ಸ್ಥಾನಕ್ಕೂ ತೈಯಾರು ಕಾರ್ಯಕರ್ತನಾಗಿ ಇರಲು ಸಿದ್ಧನಿದ್ದೇನೆ. ಹಿರಿಯರು ,ಕೇಂದ್ರ ನಾಯಕರು ಹಾಗೂ ಆರ್.ಎಸ್. ಎಸ್. ಪರಿವಾರದ ನಾಯಕರು ಹೇಳಿದಂತೆ ಅದನ್ನು ಕೇಳಿಕೊಂಡು ನಡೆಯುತ್ತೆನೆ. ನಮ್ಮ ಉದ್ದೇಶ ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಮಾಡುವದಾಗಿದೆ ಎಂದರು.

ಮಧ್ಯಂತರ ಚುನಾವಣೆ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಈಶ್ವರಪ್ಪ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಕತ್ತಿನಮಾತುಃ ಕಾಂಗ್ರೆಸ್ ನವರು ತಾಕತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ತಿದ್ರೆ ರಾಜ್ಯ 28 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿರೋದು.

ಸದಾ ತಾಕತ್ತಿನ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಚಾಮುಂಡೇಶ್ವರಿ ಚುನಾವಣೆಯಲ್ಲಿ ಸೋತಿದ್ದಾರೆ. ತಾಕತ್ತಿರೋ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ನೆಗೆದು ಬಿದ್ದು ಹೋಗಿದೆ‌. ಶಕ್ತಿಶಾಲಿ ಎಂದು ಬೀಗುವ ಕಾಂಗ್ರೆಸ್ ಸೋಲಿಸುವ ದೊಡ್ಡ ಪಡೆ ಬಿಜೆಪಿ ಹೊಂದಿದೆ. ಪಂಚರಾಜ್ಯಗಳಲ್ಲಿ ಯಾವ ರೀತಿ ಕಾಂಗ್ರೆಸ್ ಸೋತಿದೆನೋ ಅದೆ ರೀತಿ ರಾಜ್ಯದಲ್ಲಿ ಸೋಲಿಸಿ ಬಿಜೆಪಿ ತಾಕತ್ತು ತೋರಿಸುತ್ತೆವೆಂದು ಗುಡುಗಿದರು.

ಸಿಎಂ ಇಬ್ರಾಹಿಂ ಉಗುರಿನ ಧೂಳು ಸಹಿತ ಸೇರಿಸಿಕೊಳ್ಳುವದಿಲ್ಲ..!

ಸಿ.ಎಂ.ಇಬ್ರಾಹಿಂ ಬಿಜೆಪಿ ಸೇರ್ತಾರಾ.? ಎಂಬ ಪ್ರಶ್ನೆಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿ, ಸಿಎಂ ಇಬ್ರಾಹಿಂನ ಉಗುರಿನ ಧೂಳು ಸಹಿತ ಬಿಜೆಪಿಗೆ ಸೇರಿಸಿಕೊಳ್ಳುವದಿಲ್ಲ. ಸಿಎಂ ಇಬ್ರಾಹಿಂ ಆತನೊಬ್ಬ ಸ್ವಾರ್ಥಿ ಅಧಿಕಾರಕ್ಕಾಗಿ ರಾಜಕೀಯದಲ್ಲಿದ್ದಾನೆ. ಇಬ್ರಾಹಿಂ ಹಾಗೂ ಸಿದ್ದರಾಮಯ್ಯ ಇಬ್ಬರದ್ದು ಒಂದೇ ಮುಖವಾಡ ಸಿದ್ದರಾಮಯ್ಯಗೆ ಕೂಡ ವಿರೋಧ ಪಕ್ಷದ ಸ್ಥಾನದಿಂದ ಕಿತ್ತು ಹಾಕಿದರೆ ಅವರು ಕೂಡ ಕಾಂಗ್ರೆಸ್ ಬಿಡುತ್ತಾರೆಂದರು.

ಸಿಎಂ ಇಬ್ರಾಹಿಂ ಅಧಿಕಾರ ಇದ್ದರೆ ಮಾತ್ರ ಕಾಂಗ್ರೆಸ್ ನಲ್ಲಿರುತ್ತಾರೆ. ಇಲ್ಲಾಂದ್ರೆ ಬೈದು ಹೊರಗೆ ಬರುತ್ತಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಇಬ್ರಾಹಿಂ ಕೇಳಿದ್ದ ಕಾಂಗ್ರೆಸ್ ನವರು ಆ ಸ್ಥಾನವನ್ನು ನೀಡಿಲ್ಲ. ಅದಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ಸೇರಲು ಮುಂದಾಗಿದ್ದಾರೆ.

ವಿಶ್ವಗುರು ಬಸವಣ್ಣನವರು ಹೇಳದ ಪದಗಳು ಸಹ ಅವರ ಬಾಯಲ್ಲಿ ಬರುತ್ತವೆಂದು ಇಬ್ರಾಹಿಂ ವಿರುದ್ಧ ಈಶ್ವರಪ್ಪ ವ್ಯಂಗ್ಯವಾಗಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button