KSRTC ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ… ಬಸ್ ಸಿಬ್ಬಂದಿ, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ
ತಿರುವನಂತಪುರಂ: ಮಹಿಳೆಯೊಬ್ಬರು ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವೇಳೆ ಹೆರಿಗೆ ನೋವು ಕಾಣಿಸಿಕೊಂಡು ಬಸ್ಸಿನಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಕೇರಳದಲ್ಲಿ ಬುಧವಾರ ನಡೆದಿದೆ.
ಕೇರಳದ ಮಲಪ್ಪುರಂ ಮೂಲದ 37 ವರ್ಷದ ಮಹಿಳೆಯೊಬ್ಬರು ಬುಧವಾರ ಮಧ್ಯಾಹ್ನ ತ್ರಿಶೂರ್‌ನಿಂದ ಕೋಝಿಕೋಡ್‌ನ ತೊಟ್ಟಿಲ್‌ಪಾಲಮ್‌ಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಈ ವೇಳೆ ಬಸ್ಸು ಪೆರಮಂಗಲಂ ಬಳಿ ಸಂಚರಿಸುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಶುರುವಾಗಿದೆ ಈ ವಿಚಾರವನ್ನು ಬಸ್ ಚಾಲಕನ ಬಳಿ ಹೇಳಿದಾಗ ಚಾಲಕ ಕೂಡಲೇ ಬಸ್ಸನ್ನು ಆಸ್ಪತ್ರೆ ಕಡೆಗೆ ಚಲಾಯಿಸಿದ್ದಾರೆ ಅಲ್ಲದೆ ಆಸ್ಪತ್ರೆ ಸಿಬಂದಿಗೆ ಮಾಹಿತಿಯನ್ನೂ ನೀಡಿದ್ದಾರೆ ಬಸ್ಸು ಆಸ್ಪತ್ರೆ ಬಳಿ ಹೋಗುತ್ತಿದ್ದಂತೆ ಹೆರಿಗೆ ನೋವು ಜಾಸ್ತಿಯಾದ ಕಾರಣ ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರನ್ನು ಇಳಿಸಿದ ಆಸ್ಪತ್ರೆ ಸಿಬಂದಿ ಬಸ್ಸಿನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.
ಬಸ್ ಸಿಬ್ಬಂದಿ ಮತ್ತು ಅಮಲಾ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರ ಸಕಾಲಿಕ ನೆರವಿನಿಂದ ಮಹಿಳೆ ಬಸ್‌ನೊಳಗೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ತಾಯಿ ಮತ್ತು ಮಗು ಆರೋಗ್ಯವಾಗಿದ್ದು, ಸಕಾಲಕ್ಕೆ ಸ್ಪಂದಿಸಿದ ಬಸ್ ಸಿಬಂದಿಗಳು ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.