ಪಂಚಭೂತಗಳಲ್ಲಿ ಗಾನ ಕೋಗಿಲೆ ಲೀನ, ಸಹಸ್ರಾರು ಅಭಿಮಾನಿ, ಗಣ್ಯರಿಂದ ಅಂತಿಮ ದರ್ಶನ

ಪಂಚಭೂತಗಳಲ್ಲಿ ಗಾನ ಕೋಗಿಲೆ ಲೀನ, ಸಹಸ್ರಾರು ಅಭಿಮಾನಿ, ಗಣ್ಯರಿಂದ ಅಂತಿಮ ದರ್ಶನ
ಮುಂಬೈಃ ಭಾರತದ ಹೆಸರಾಂತ ಗಾನ ಕೋಗಿಲೆ ಲತಾ ಮಂಗೇಶ್ಕರ್ ರವಿವಾರ ಸಂಜೆ ಪಂಚಭೂತಗಳಲ್ಲಿ ಲೀನವಾದರು. ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಲಾಯಿತು.
ಪ್ರಧಾನಿ ಮೋದಿಯವರು ಯುಪಿ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿದ್ದರು. ಆದರೆ ಲತಾ ದೀದಿ ವಿಧಿವಶರಾದ ಸುದ್ದಿ ತಿಳಿದು ತಕ್ಷಣ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೀದಿ ಅಂತಿಮ ದರ್ಶನಕ್ಕೆ ವಾಪಾಸಾಗಿದ್ದರು. ಸಂಜೆ ವೇಳೆಗೆ ಆಗಮಿಸಿ ಲತಾ ದೀದಿ ಅವರಿಗೆ ನಮನಗಳನ್ನು ಸಲ್ಲಿಸಿದ್ದರು.
ಅಂತಿಮ ದರ್ಶನಕ್ಕಾಗಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು, ದೇಶದ ಗಣ್ಯರು ಭಾಗವಹಿಸಿದ್ದರು. ಲತಾ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಟ್ಟಿತು. ಲತಾ ದೀದಿ ಅವರ ಪಾರ್ಥಿವ ಶರೀರಿದ ಮೇಲೆ ಹೊದಿಸಲಾದ ರಾಷ್ಟ್ರ ಧ್ವಜವನ್ನು ಹೃದಯನಾಥ ಮಂಗೇಶ್ಕರ್ ಅವರ ಪುತ್ರ ಆದಿನಾಥ ಮಂಗೇಶ್ಕರ್ ಅವರು ಸ್ವೀಕರಿಸಿದರು.