ಪ್ರಮುಖ ಸುದ್ದಿ

ಕಲ್ಬುರ್ಗಿಃ ಲಕ್ಷ್ಮೀ ದೇವಸ್ಥಾನ ಸಂಭ್ರಮದ ಕಳಸಾರೋಹಣ

ಕಲ್ಬುರ್ಗಿಃ ಲಕ್ಷ್ಮೀ ದೇವಸ್ಥಾನ ಸಂಭ್ರಮದ ಕಳಸಾರೋಹಣ

ಕಲ್ಬುರ್ಗಿಃ ದೇವಸ್ಥಾನ, ಗುಡಿ ಗುಂಡಾರಗಳು ನಾಗರಕರಿಗೆ ನೆಮ್ಮದಿ ಒದಗಿಸುವ ತಾಣಗಳು. ಸಮಸ್ಯೆ ಎದುರಾದಾಗ ಶಕ್ತಿ ಕಲ್ಪಿಸುವ ಪುಣ್ಯ ಕ್ಷೇತ್ರಗಳು ಎಂದು ಷ.ಬ್ರ.108 ವೀರ ತಪಸ್ವಿ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿ ತಿಳಿಸಿದರು.
ತಾಲೂಕಿನ ಭೀಮಳ್ಳಿ ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದ ನೂತನ ಕಳಸಾರೋಹಣ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಬದುಕಿನ ಪಯಣದಲ್ಲಿ ಶಾಂತಿ, ಸಂಯಮ, ನೆಮ್ಮದಿ ಅಗತ್ಯ. ಸಂಸಾರದ ಜಂಜಾಟದಲ್ಲಿ ಹತ್ತು ಹಲವು ಸಮಸ್ಯೆಗಳು ಸಾಮಾನ್ಯ. ಅವುಗಳನ್ನು ಮೆಟ್ಟಿ ಮುಂದೆ ಸಾಗುವದು ಅನಿವಾರ್ಯ.

ನಿತ್ಯ ದುಡಿಮೆಯ ನಡುವೆ ಒಂದಿಷ್ಟು ಗುಡಿ, ಗುಂಡಾರ, ಮಠಗಳಿಗೆ ಹೋಗಿ ಸಮಯ ಕಳೆದು, ಸಾರ್ವಜನಿಕ ಸಹಭಾಗಿತ್ವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸದ್ವಿಚಾರಗಳನ್ನು ಆಲಿಸುವದರಿಂದ ಸೇವಾ ಮನೋಭಾವದಿ ಭಾಗವಹಿಸುವಿಕೆಯಿಂದ ಮನಸ್ಸು ಹಗುರವಾಗಿ ನಾಲ್ಕು‌ ಮಂದಿ ಜೊತೆ ಬೆರೆಯುವ ಮೂಲಕ ಪರಸ್ಪರರ ಕಷ್ಟ ಸುಖಕ್ಕೆ ಹೆಗಲು ನೀಡುವ ಮೂಲಕ ಬದುಕಿನ ದಾರಿ ಕಂಡುಕೊಳ್ಳಬಹುದು ಎಂದರು.

ಕಳಸಾರೋಹಣ ಸಂಭ್ರಮದಲ್ಲಿ ಗ್ರಾಮದ ಸುಮಂಗಲಿಯರು ಕುಂಭ ಕಳಸ, ಆರತಿ ಹೊತ್ತು ಶ್ರೀದೇವಿ ದರ್ಶನ ಪಡೆದು ಪುನೀತರಾದರು.

ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವು ಜರುಗಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಕಿರಿಯರು‌ ಮತ್ತು ಮಹಿಳೆಯರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು. ನಂತರ ಪ್ರಸಾದ ಸೇವೆ ನಡೆಯಿತು.

Related Articles

Leave a Reply

Your email address will not be published. Required fields are marked *

Back to top button