ಲೋಕಸಭಾ ಚುನಾವಣೆ 2024: 6ನೇ ಹಂತದ ಮತದಾನ ಆರಂಭ, 58 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ
ಬೆಂಗಳೂರು: ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಅಂತಿಮ ಘಟ್ಟದತ್ತ ಸಾಗಿದೆ. ಇಂದು ಶನಿವಾರ (ಮೇ 25) ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾರರು ಮತ ಚಲಾಯಿಸಲಿದ್ದಾರೆ.
ಇದು 08 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ. ಆಯಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಈಗಾಗಲೇ ಮತಗಟ್ಟೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ನಂತರ ಜೂನ್ 01ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 04ರಂದು ಸಾರ್ವತ್ರಿಕ ಚುನಾವಣೆಯ ಎಲ್ಲ ಹಂತಗಳ ಫಲಿತಾಂಶವು ಪ್ರಕಟಗೊಳ್ಳಲಿದೆ.
ಇಂದಿನ 6ನೇ ಹಂತದ ಮತದಾನಕ್ಕೆ ಸಂಬಂಧಿಸಿದ ವಿಷಯಗಳು, ಘಟನಾವಳಿಗಳು, ಪ್ರಮುಖರ ಮತದಾನ ಹಾಗೂ ಆಯಾ ಸಮಯದಲ್ಲಿನ ಮತದಾನ ಪ್ರಮಾಣ ಸೇರಿದಂತೆ ಅನೇಕ ಲೈವ್ ಅಂಶಗಳನ್ನು ನೀವು ‘ಒನ್‌ಇಂಡಿಯಾ ಕನ್ನಡ’ದ ನೇರಪ್ರಸಾರದಲ್ಲಿ ತಿಳಿಯಬಹದು.