ಪ್ರಮುಖ ಸುದ್ದಿ
ಲಾರಿ ಪಲ್ಟಿ; ಯಾದಗಿರಿ ಬಳಿ ಬೀದಿ ಪಾಲಾದ ಬಿಯರ್!
ನಶೆಯಲ್ಲಿತ್ತಾ ಬಿಯರ್ ಹೊತ್ತ ಲಾರಿ!
ಯಾದಗಿರಿ: ಯಾಗಾಪುರ ಕ್ರಾಸ್ ಬಳಿ ಬಿಯರ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದೆ. ಮೈಸೂರಿನಿಂದ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣಕ್ಕೆ ಬಿಯರ್ ಸರಬರಾಜು ಮಾಡಲಾಗುತ್ತಿತ್ತು. ಸರ್ಕಾರಿ ಸ್ವಾಮ್ಯದ ಎಮ್ ಎಸ್ ಐ ಎಲ್ ನಿಂದ ಬಿಯರ್ ಬಾಟಲಿ ಬಾಕ್ಸ್ ಗಳನ್ನು ಸಾಗಿಸಲಾಗುತ್ತಿತ್ತು.
ಚಾಲಕ ಕುಡಿದ ಅಮಲಿನಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಚಾಲಕನ ಅಜಾಗರೂಕತೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯ ಬೀದಿ ಪಾಲಾಗಿದೆ. ನೂರಾರು ಬಿಯರ್ ಬಾಟಲಿಗಳು ಒಡೆದು ಬಿದ್ದಿವೆ.
ಮತ್ತೊಂದು ಕಡೆ ಕೆಲವು ಜನ ಮದ್ಯಪ್ರಿಯರು ಅಳಿದುಳಿದ ಬಿಯರ್ ಬಾಟಲಿಗಳನ್ನು ಎತ್ತಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಸಧ್ಯ ಮಧ್ಯರಾತ್ರಿ ವೇಳೆ ಘಟನೆ ನಡೆದಿದ್ದು ಹೆಚ್ಚಿನ ನಷ್ಠತಪ್ಪಿದಂತಾಗಿದೆ. ವಿಷಯ ತಿಳಿದು ಯಾದಗಿರಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.