ಕರ್ನಾಟಕ ಗಡಿಭಾಗದ ಹಳ್ಳಿಗಳ ಮೇಲೆ ಮಹಾರಾಷ್ಟ್ರ ಕಣ್ಣು
ಕರ್ನಾಟಕ ಗಡಿಭಾಗದ ಹಳ್ಳಿಗಳ ಮೇಲೆ ಮಹಾರಾಷ್ಟ್ರ ಕಣ್ಣು
ವಿವಿ ಡೆಸ್ಕ್ಃ ಬೆಳಗಾವಿ ಭಾಗದ ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಪ್ರಾಂತ್ಯವಾರು ರಚನೆ ಸಂದರ್ಭ ಸರಿಯಾಗಿ ಆಗಿಲ್ಲ. ಮರಾಠಿಗರ ಹೋರಾಟ ವ್ಯರ್ಥ ವಾಗಲು ಬಿಡಲ್ಲ. ಶ್ರದ್ಧಾಂಜಲಿ ರೂಪದಲ್ಲಿ ಕರುನಾಡಿನ ಬೆಳಗಾವಿ ಭಾಗದ ಹಲವು ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಇದೀಗ ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆ ಕ್ಯಾತೆ ತೆಗೆದಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕರುನಾಡ ಭಾಗದ ಹಳ್ಳಿಗಳು ಮಹಾರಾಷ್ಟ್ರ ಕ್ಕೆ ಸೇರ್ಪಡೆಯಾಗಬೆಕಿದೆ. ಆ ಕೆಲಸ ಬಿಟ್ಟಿಲ್ಲ ಮುಂದುವರೆದಿದೆ ಎಂದು ಟ್ವಿಟ್ ಮಾಡುವ ಮೂಲಕ ಕನ್ನಡಿಗರಲ್ಲಿ ಕಿಚ್ಚು ಹಚ್ಚಿದ್ದರು. ಇದೀಗ ಅದನ್ನು ಬೆಂಬಲಿಸಿ ಸಚಿವ ಏಕನಾಥ್ ಶಿಂಧೆ ಹೇಳಿಕೆ ನೀಡಿದ್ದಾರೆ.
ಇವರ ಹೇಳಿಕೆ ಕ್ಯಾತೆ ಕುರಿತು ಕರುನಾಡಿನ ಕನ್ನಡಪರ ಹೊರಾಟಗಾರರು ಬೆಂಗಳೂರ ಸೇರಿದಂತೆ ಇದೀಗ ಎಲ್ಲಡೆ ಉದ್ಧವ್ ಠಾಕ್ರೆ ಅಣಕು ಶವಯಾತ್ರೆ, ಭಾವಚಿತ್ರಕ್ಕೆ ಬೆಂಕಿ ಇಟ್ಟು ಮಹಾರಾಷ್ಟ್ರ ಸಿಎಂ ಉದ್ಧಟತನ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಯಾವ ಹಂತ ಇದು ತಲುಪಲಿದೆ ಎಂಬುದು ಕಾದು ನೋಡಬೇಕು.