BREAKING NEWS ದೋರನಹಳ್ಳಿ ವೀರ ಮಹಾಂತ ಶಿವಾಚಾರ್ಯರು ಇನ್ನಿಲ್ಲ
ಬೆಂಗಳೂರಿನಿಂದ ಬರುವಾಗ ಹೃದಯಾಘಾತ - ಹಿರೇಮಠದ ಮುಂದೆ ಭಕ್ತರ ದಂಡು
ದೋರನಹಳ್ಳಿ ಮಹಾಂತ ಶಿವಾಚಾರ್ಯರು ಹೃದಯಾಘಾತದಿಂದ ನಿಧನ
ಬೆಂಗಳೂರಿನಿಂದ ಬರುವಾಗ ಹೃದಯಾಘಾತ ಹಿರೇಮಠದ ಮುಂದೆ ಭಕ್ತರ ಆಕ್ರಂದನ
yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಗ್ರಾಮದ ಹಿರೇಮಠದ ವೀರಮಹಾಂತ ಶಿವಾಚಾರ್ಯರು ಹೃದಯಾಘಾತದಿಂದ ಇಹಲೋಕ ತ್ಯೇಜಿಸಿದರು.
ಮುಂದಿನ ತಿಂಗಳು ಅವರ 25 ನೇ ವರ್ಷದ ಪಟ್ಟಾಧಿಕಾರ ಕಾರ್ಯಕ್ರಮ ಹಿನ್ನೆಲೆ ಗಣ್ಯರಿಗೆ ಆಮಂತ್ರಣ ನೀಡಲು ಬೆಂಗಳೂರಿಗೆ ತೆರಳಿದ್ದರು. ಎಲ್ಲರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿ ವಾಪಾಸ್ ಆಗುವ ವೇಳೆ ರೈಲು ನಿಲ್ದಾಣದಲ್ಲಿ ಶ್ರೀಗಳಿಗೆ ಹೃದಯಾಘಾತ ಸಂಭವಿಸಿದೆ.
ತಕ್ಷಣವೇ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ಅಷ್ಟೊತ್ತಿಗಾಗಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಎನ್ನಲಾಗಿದೆ. ಜೊತೆಯಲಿ ಶ್ರೀಗಳ ಭಕ್ತರಾಗಿದ್ದ ರಾಯಪ್ಪಗೌಡ ದರ್ಶನಾಪುರ ಮತ್ತು ಷಣ್ಮುಖಪ್ಪ ಕಕ್ಕೇರಿ ಇದ್ದರು. ಶ್ರೀಗಳ ಜೀವ ಉಳಿಸಲು ಪರದಾಡಿದರು. ಕೊನೆಗೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಶ್ರೀಗಳು ಬಾರದ ಲೋಕಕ್ಕೆ ತೆರಳಿದ್ದರು. ಶ್ರೀಗಳ ಅಗಲಿಕೆಯಿಂದ ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ ಎಂದು ಭಕ್ತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶ್ರೀಗಳು ಇನ್ನಿಲ್ಲಎಂಬ ಸುದ್ದಿ ತಿಳಿದ ಭಕ್ತರು ಗ್ರಾಮದ ಹಿರೇಮಠ ಮುಂದೆ ಜಮಾವಣೆಗೊಂಡಿದ್ದು, ಕಣ್ಣೀರು ಹಾಕುತ್ತಿದ್ದಾರೆ. ಶ್ರೀಗಳ ಅಗಲಿಕೆಯಿಂದ ಭಕ್ತಾಧಿಗಳು ಕಂಗಾಲಾಗಿದ್ದಾರೆ.