ಪ್ರಮುಖ ಸುದ್ದಿವಿನಯ ವಿಶೇಷ

ಮದುಮಕ್ಕಳಿಂದ ಸಸಿ ವಿತರಣೆಃ ಹಸಿರು ಸಮೃದ್ಧಿಗೆ ಮನವಿ

ನೂತನ ದಂಪತಿಗಳ ಕಾರ್ಯಕ್ಕೆ ಮಾಜಿ ಶಾಸಕ ಶಿರವಾಳ ಮೆಚ್ಚುಗೆ

 

ಹಸಿರುಕರಣಕ್ಕೆ ಮದುಮಕ್ಕಳ ಪಣಃ ಆರತಕ್ಷತೆಗೆ ಬಂದವರಿಗೆ ಸಸಿ ವಿತರಣೆ

ನೂತನ ದಂಪತಿಗಳ ಕಾರ್ಯಕ್ಕೆ ಮಾಜಿ ಶಾಸಕ ಶಿರವಾಳ ಮೆಚ್ಚುಗೆ

yadgiri, ಶಹಾಪುರಃ ಮದುವೆ ಸಂಭ್ರಮ ಎಂದರೆ ಎಲ್ಲಡೆ ಖುಷಿಯೋ ಖುಷಿ ಹಲವಡೆ ವಾದ್ಯಗಳ ನಿನಾದ, ರಸಮಂಜರಿ ಕಾರ್ಯಕ್ರಮ ಸೇರಿದಂತೆ ಮದುವೆಗೆ ಆಗಮಿಸಿದ ಗಣ್ಯರಿಗೆ ಶಾಲು ಹೊದಿಸಿ ಹಾರ ಹಾಕುವದು ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ದಂಪತಿಗಳಿಬ್ಬರು ಬಿಸಿಲು ನಾಡಿನ ಭಾಗದಲ್ಲಿ ಹಸಿರೀಕರಣಗೊಳಿಸುವದು ಅಗತ್ಯತೆ ಕಂಡು ತಮ್ಮ ಮದುವೆಯಲ್ಲಿ ಆರತಕ್ಷತೆ ಹಾಕಲು ಬಂದವರಿಗೆ ಸಸಿ ವಿತರಿಸುವ ಮೂಲಕ ವಿನೂತನವಾಗಿ ಹಸಿರು ಕ್ರಾಂತಿಗೆ ಮುಂದಾಗಿದ್ದಾರೆ.

ತಾಲೂಕಿನ ಸೈದಾಪುರ ಗ್ರಾಮದ ಈರಣ್ಣಗೌಡ ಪೋ.ಬಿರಾದಾರ ಜೊತೆ ನಾಗನಟಿಗಿ ಗ್ರಾಮದ ಲಕ್ಷ್ಮೀ ಈ ಇಬ್ಬರು ಸಪ್ತಪದಿ ತುಳಿದ ವೇಳೆ ತಮಗೆ ಆರತಕ್ಷತೆ ಹಾಕಲು ಬಂದವರಿಗೆ ವಿನ್ರಮವಾಗಿ ಸಸಿಗಳನ್ನು ನೀಡುವ ಮೂಲಕ ಹಸೀರಿಕರಣಕ್ಕೆ ಒತ್ತು ನೀಡುವಂತೆ ಮನವಿ ಮಾಡುತ್ತಿರುವದು ಕಂಡು ಬಂದಿತು.

ಪೊಲೀಸ್ ಬಿರಾದಾರ ಪರಿವಾರದ ಮದುವೆ ಇದಾಗಿದ್ದು, ಸಮೀಪದ ಭೀಮರಾಯನ ಗುಡಿ ಕಲ್ಯಾಣ ಮಂಟಪದಲ್ಲಿ ಮದುವೆ ಜರುಗಿತು, ಈ ಸಂದರ್ಭದಲ್ಲಿ ಮದುವೆಗೆ ಆಗಮಿಸಿದ ಎಲ್ಲರಿಗೂ ನೂರಾರು ಸಸಿಗಳನ್ನು ವಿತರಿಸುವ ಮೂಲಕ ಹಸಿರು ಸಮೃದ್ಧಿಗೆ ಸಹಕರಿಸುವಂತೆ ಕೋರುವ ವಿನೂತನ ಸಂದೇಶ ರವಾನಿಸುವ ಕಾರ್ಯವನ್ನು ಈ ಮದುವೆ ಸಮಾರಂಭದಲ್ಲಿ ಜರುಗಿತು.

ಸಾಕಷ್ಟು ಮದುವೆಗಳನ್ನು ಕಂಡಿದ್ದೇವೆ. ಆದರೆ ಈ ಪೊಲೀಸ್ ಪರಿವಾರ ಮದುವೆ ಸಮಾರಂಭದಲ್ಲಿ ದಂಪತಿಗಳಿಬ್ಬರು ಪ್ರಜ್ಞಾವಂತರಾಗಿದ್ದು, ನಮ್ಮ ಭಾಗದ ಹಸಿರು ಸಮೃದ್ಧಿಗಾಗಿ ಆರತಕ್ಷತೆ ಹಾಕಲು ಬಂದ ಎಲ್ಲರಿಗೂ ಸಸಿಗಳನ್ನು ದಂಪತಿಗಳಿಬ್ಬರು ವಿತರಿಸುತ್ತಿರುವದು ವಿನೂತನವಾಗಿದ್ದು, ಅಲ್ಲದೆ ಇದು ನಮ್ಮ ಭಾಗದಲ್ಲಿ ಹಸಿರು ಕ್ರಾಂತಿ ಪ್ರಜ್ಞೆ ಮೂಡಿಸುವಲ್ಲಿ ಅವರ ಹೆಜ್ಜೆ ಮೆಚ್ಚುವಂತಹದ್ದು. ಈ ಭಾಗದಲ್ಲಿ ಅರಣ್ಯ ಪ್ರದೇಶ ಕಡಿಮೆ ಇದೆ. ಪ್ರತಿಯೊಬ್ಬರು ಗಿಡ, ಮರಗಳನ್ನು ಬೆಳೆಸುವ, ಉಳಿಸುವ ಕಾರ್ಯ ಮಾಡಲೇ ಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ಉಸಿರಾಡಲು ಗಾಳಿ ಕೊಂಡುಕೊಳ್ಳುವ ದುಸ್ಥಿತಿ ಬರಬಾರದು.

-ಗುರು ಪಾಟೀಲ್ ಶಿರವಾಳ. ಮಾಜಿ ಶಾಸಕರು.

———————-

Related Articles

Leave a Reply

Your email address will not be published. Required fields are marked *

Back to top button