ರವಿ ಇಲ್ಲದ ಚೆಲುವು ಎಲ್ಲಿ.? ಬಡಿಗೇರ ಬರೆದ ಕಾವ್ಯ
ರವಿ ಬೆಳಗೆರೆ
———————
ರವಿ ನೀನಿರದೆ
ಆ ಚೆಲುವೆ ನಗುವುಳೇನು ?
ಆ ಬಾಟಂನ ಐಟಂನ
ಕಾಲಂನಲ್ಲಿ ಕುಳಿತು
ತುಸು ತುಂಟ ನಗೆ ಬೀರಿ
ಓ ಮನಸ್ಸೆ…
ಚೆಲ್ಲಾಟದ ನಗುವಿನಲ್ಲಿ
ಕಚಗುಳಿ ಇಟ್ಟು ನಗುವಾಕಿ
ನೀನಿಲ್ಲದೆ ನಗುವುಳೇನು ?
ಖಾಸ್ ಬಾತ್ ನ
ಯಶೋಗಾಥೆ ಸಾಧಕರಿಗೆ
ಚೌ ಚೌ ಬಾಥ್ನಂತೆ
ಮರೆಯಲು ಸಾಧ್ಯವೆ
ಆ ನಿನ್ನ ಕಪ್ಪು ಕಣ್ಣಿನ ಬೆಡಗಿ
ಹಾಯ್ ಬೆಂಗಳೂರ ತುಡಗಿ
ಕೆಂದುಟಿಯ ಸವಿ ಮಾತಿನ
ಅರಗಿಣಿ…
ಕೊಲೆಗಾರರಿಗು ನಿನ್ನವಳ
ಕಂಡರೇ..
ಕೊಂಚ ಎದೆ ಬಡಿತದ
ರಿಲ್ಯಾಕ್ಸ್
ಇಂಚು ಇಂಚಿನಲ್ಲಿ
ಹಂಚಿ ಹೇಳದೆ ಹೋದೆ
ನೀ ದೂರ
ಹೇಳಿ ಹೋಗಬಾರದೆ ಕಾರಣ
ಬೇಕಿಲ್ಲ ನನಗೆ ನಿನ್ನ ಹೂರಣ
ಅವಳು ನಗಬೇಕು
ಕನ್ನಡ ತಾಯಿಯ ಹೆಬ್ಬಾಗಿಲು ತೊರಣ ..
ಉಟ್ಟ ಬಟ್ಟೆಯಲ್ಲಿ
ಬಡತನವ ಹೊದ್ದು ಗಣಿಯ
ನೆಲದಿಂದ ದಣಿವಾರಿಸಿಕೊಳ್ಳದೆ
ನಿದ್ದೆಯಿಲ್ಲದೆ ನಡೆದ ದಾರಿ
ಯಾವ ಅಘೋರಿಯು
ನಿನ್ನಂತಿಲ್ಲ it’s reaily
ನಿಜ truth ಸತ್ಯ
ನೀ ನಡೆದ ಅಕ್ಷರಗಳ ಜಾತ್ರೆ
ನೀ ನುಡಿದ ನುಡಿಗಳ ಯಾತ್ರೆ
ನಿಜಕ್ಕೂ ರೋಮಾಂಚನ
ನಿನ್ನ ಹುಡುಗಿಯ
ಕಣ್ಣಿಂದ ಸೃಷ್ಟಿಸಿದ
ಭೂಗತಲೋಕ
ಹೊಸ ಬರವಣಿಗೆಗೆ ಅಬ್ಬರ
ಹೊಸ ತಲೆಮಾರಿನ ಅಂಬರ
ನೀ ತೊಟ್ಟ ಕೋಟಿನೊಳಗೆ
ಕತ್ತಲೆ ಲೋಕದ ಪಿಸ್ತೂಲ್
ಲೋಕ ರೂಢಿಯ ಪರಿಚಯ
ನೀನಿಟ್ಟ ಖಾಲಿ ಕಿಸೆಯ ಪೆನ್ನು
ಗನ್ನಿಗಿಂತಲು ಖಡಕ್
ಇದೆ ಇರಬೇಕು
ನಿನ್ನ ಖದರ್….
ಯಾರದೆ ಇರಲಿ ದರ್ಭಾರ
ನೀನೆ ಮದರ್
ಮರೆಯುವುದೆಂತು
ಪತ್ರಿಕೆಗೆ ಗಾಡಫಾದರ್
But….ನಿನ್ನ ಸಾಧನೆಗೆ
ನಾವೆಲ್ಲರೂ ಸೆಲ್ಯೂಟ
— ಗಂಗಾಧರ.ಎಂ.ಬಡಿಗೇರ