ಬಿಜೆಪಿ ಗೋಲ್‍ಮಾಲ್ ಸರ್ಕಾರ ಖರ್ಗೆ ಆರೋಪ

ರೆಸಾರ್ಟ್, ಆಪರೇಷನ್ ಕಮಲ, ಖುರ್ಚಿ ಕಿತ್ತಾಟದಲ್ಲಿ ಕಾಲಹರಣ
yadgiri, ಶಹಾಪುರಃ ಬಿಜೆಪಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ಸಾಮಾಜಿಕ ಸಮಸ್ಯೆಗಳ ಪರಿಹರಿಸುವುದು ಬೇಕಿಲ್ಲ. ಏನಿದ್ದರೂ ರೆಸಾರ್ಟ್ ರಾಜಕೀಯ, ಆಪರೇಷನ್ ಕಮಲ ಮೂಲಕ ಅಧಿಕಾರ ಪಡೆಯೋದು ತಮ್ಮಲ್ಲಿಯೇ ಖುರ್ಚಿ ಕಿತ್ತಾಟದಲ್ಲಿ ಕಾಲಹಾರಣ ಮಾಡೋದು ಮತ್ತು ಆಡಳಿದಲ್ಲಿ ಪರ್ಸೆಂಟೇಜ್ ದಂದೆಯಲ್ಲಿ ಮುಳುಗುವುದು ಎಂದು ಚಿತಾಪುರ ಶಾಸಕ, ಕಾಂಗ್ರೆಸ್ ವಕ್ತಾರ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ನಗರದ ಆರಬೋಳ ಕಲ್ಯಾಣ ಪಂಟಪದಲ್ಲಿ ಎಂಎಲ್ಸಿ ಚುನಾವಣೆ ಅಂಗವಾಗಿ ತಾಲೂಕು ಕಾಂಗ್ರೆಸ್ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೆರೆ ಹಾವಳಿ, ರೈತರ ಸಂಕಷ್ಟದ ಸಂದರ್ಭದಲ್ಲಿ ಸೂಕ್ರ ಸ್ಪಂಧನೆ ನೀಡದ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಇಲ್ಲದ ಆಸೆ ತೋರಿಸಿ ಮತಯಾಚನೆ ಮಾಡುತ್ತಿದೆ ಎಂದ ಅವರು, ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ ಅವರಿಗೆ ಗ್ರಾಪಂ ಮತ್ತು ತಾಪಂ ಯಾವ ಕಾರ್ಯ ನಿರ್ವಹಿಸುತ್ತದೆ.? ಅಲ್ಲಿ ಯಾವ ಯೋಜನೆಗಳಿವೆ ಎಂಬುದೇ ಗೊತ್ತಿಲ್ಲ. ಗೊತ್ತಿದ್ದರೆ ನಾಗರಿಕರ ಮುಂದಿಡಲಿ ಎಂದು ಸವಾಲ್ ಹಾಕಿದರು.
ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಮರತೂರ ಜಿಪಂ ಸದಸ್ಯರಾಗಿದ್ದವರು, ಗ್ರಾಮಾಭಿವೃದ್ಧಿಯ ಸಂಪೂರ್ಣ ಪರಿ ಕಲ್ಪನೆ ಅವರಿಗೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಅವರು ಮಾಡಿದ್ದಾರೆ. ಪರಿಪೂರ್ಣ ವ್ಯಕ್ತಿಗೆ ಮತ ನೀಡುವ ಮೂಲಕ ಗ್ರಾಮಾಭಿವೃದ್ಧಿಗೆ ಸಹಾಯವಾಗಲಿದೆ. ಈ ಕುರಿತು ಮತದಾರರು ಯೋಚಿಸಬೇಕು. ಕೇವಲ ಹಣದಾಸೆಗೆ ಗ್ರಾಮ ಬಲಿ ಕೊಡಬೇಡಿ. ಕಾಂಗ್ರೆಸ್ ಅಭ್ಯರ್ಥಿ ಮರ್ತೂರ ಅವರಿಗೆ ಮತ ನೀಡುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಸಹಕರಿಸಿ ಎಂದರು.
ಶಾಸಕ ಶರಣಬಸಪಗೌಡ ದರ್ಶನಾಪುರ ಮತ್ತು ಶಾಸಕ ಅಜಯ್ ಸಿಂಗ್ ಮತನಾಡಿ ಕಾಂಗ್ರೆಸ್ ಸಮಾನತೆಯ ಬದುಕಿಗೆ ತುಡಿಯುತ್ತದೆ. ಗ್ರಾಮ ಬದಲಾವಣೆಗೆ ಸಹಕರಿಸಲಿದೆ. ಉತ್ತಮ ಚಾರಿತ್ರ್ಯವುಳ್ಳ ಗ್ರಾಮೀಣ ಅಭಿವೃದ್ಧಿಯ ಕನಸೊತ್ತ ಶಿವಾನಂದ ಪಾಟೀಲರಿಗೆ ಮತ ನೀಡಿ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್, ಅಲ್ಲಮಪ್ರಭು ಪಾಟೀಲ್, ಡಾ.ಶರಣಪ್ರಕಾಶ ಪಾಟೀಲ್, ಶಂಕ್ರಣ್ಣ ವಣಿಕ್ಯಾಳ, ಶರಣಪ್ಪ ಸಲಾದಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.