ಪ್ರಮುಖ ಸುದ್ದಿ

ಸ್ವಾತಂತ್ರ್ಯ ಧ್ಚಜಾರೋಹಣ ನೆರವೇರಿಸಿ‌ ಮೋದಿ ಅಬ್ಬರದ ಭಾಷಣ ವಿವಿಧ‌ ಕ್ಷೇತ್ರದಲ್ಲಿ‌‌ ಭಾರತ‌ ಪ್ರಗತಿಯತ್ತ‌ ಸಾಗ್ತಿದೆ – ಮೋದಿ

ಕೆಂಪುಕೋಟೆ ಮೇಲೆ‌ ಧ್ವಜಾರೋಹಣ ನೆರವೇರಿಸಿ ಮೋದಿ ಅಬ್ಬರ ಭಾಷಣ

ಯುವ ಶಕ್ತಿ ಮೇಲೆ ನಂಬಿಕೆ ಇದೆ, ಯುವ ಶಕ್ತಿಯಿಂದ ಸ್ಟಾರ್ಟ್ ಅಪ್ ಪ್ರಭಾವ, ವಿಶ್ವದಾದ್ಯಂತ ಭಾರತದ ಡಿಜಿಟಲ್ ಸಾಮರ್ಥ್ಯ ಆಧುನಿಕತೆಯತ್ತ ಭಾರತ – ಪ್ರಧಾನಿ ಮೋದಿ

ಮಣಿಪುರ ಶಾಂತಿಯತ್ತ, ಸಮಧಾನದಿಂದಿರ್ರಿ ಸರ್ಕಾರ ನಿಮ್ಮ ಜತೆಗಿದೆ – ಮೋದಿ

ಕೆಂಪುಕೋಟೆಃ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆ ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿಯವರು 10 ನೇ ಬಾರಿಗೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಂದರ್ಭದಲ್ಲಿ ದೇಶವನ್ನುದ್ದೇಶಿ ಅವರು ಮಾತನಾಡುತ್ತಿದ್ದಾರೆ.

ದೇಶ 140 ಕೋಟಿ ನನ್ನ‌ ಪರಿವಾರದ ಸಹೋದರ ಸಹೋದರಿಯರಿಗೆ ಶುಭಾಶಯಗಳನ್ನು ಕೋರುತ್ತಾ ಮಾತು ಆರಂಭಿಸಿದ ಅವರು,
ದೇಶದ ಸ್ವಾತಂತ್ರ್ಯ ದ ಸಂಭ್ರಮಾಚರಣೆಗೆ ಕೊಡುಗೆ ನೀಡಿದ ಮತ್ತು ತ್ಯಾಗ, ಬಲಿದಾನವಾದ ಮಹನೀಯರಿಗೆ ನಾನು ವಂದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ‌‌‌ ಎಂದಿದ್ದಾರೆ.

ಮಣಿಪುರದಲ್ಲಿ ಕೆಲ ದಿನಗಳ ಹಿಂದೆ ಹಿಂಸಾಚಾರ ನಡೆದಿತ್ತು,‌ ಹಲವು‌ ಜನರು ಪ್ರಾಣ ಕಳೆದುಕೊಂಡಿದ್ದರು. ಆದರೆ ಇದೀಗ ಶಾಂತಿಯತ್ತ ಹೆಜ್ಜೆ ಹಾಕಿದೆ. ಶಾಂತಿ ಸಮಾಧಾನದಿಂದಿರಲು‌ ಅವರು ಕರೆ ನೀಡಿದರು. ಸರ್ಕಾರ ಅದಾ ನಿಮ್ಮ‌ಜತೆ ಇರಲಿದೆ ಎನ್ನುವ ಅಭಯ ನೀಡಿ ವಿಶ್ವಾಸ ತುಂಬುವ ಕೆಲಸ‌ ಮಾಡಿದರು.

ದೇಶ ಎಲ್ಲಾ ಕ್ಷೇತ್ರ ಗಳಲ್ಲಿ‌‌ ಪ್ರಗತಿಯತ್ತ ಸಾಗ್ತಿದೆ..
ಸಹಕಾರಿ ಸಂಸ್ಥೆಗಳಿಂದ ಬಡವರ ಕಲ್ಯಾಣ ಕಾರ್ಯ ನಡೆತಿದೆ.‌ ಮತ್ಸ್ಯಫಲ, ಮೀನುಗಾರರ ಕಲ್ಯಾಣ, ನಾವು ಬಡವರ ಕಲ್ಯಾಣದಲ್ಲಿ ತೊಡಗಿಸಿಕೊಂಡಿದ್ದೇವೆ.

ರೈತರಿಗೆ ಯೂರಿಯಾವನ್ನು ಸುಲಭವಾಗಿ ಕಡಿಮೆ‌ ದರದಲ್ಲಿ ದೊರೆಯುವಂತೆ ಮಾಟಿದೆ.‌ ಮುದ್ರಾ ಯೋಜನೆಯ ಲಾಭವನ್ನು ಕೋಟ್ಯಂತರ ಜನ‌ ಲಾಭ ಪಢದುಕೊಂಡಿದ್ದಾರೆ. ದೇಶದ ತಿಜೋರಿ ಜನತಾ ದರ್ಶನಕ್ಕಾಗಿ‌ ಮೀಸಲಿಡಲಾಗಿದೆ. ಬಡವರ ಅಭಿವೃದ್ಧಿಗೆ ಸುಮಾರು 4 ಲಕ್ಷ‌ಕೋಟಿ‌ ಖರ್ಚು ಮಾಡಲಾಗುತ್ತಿದೆ. ವ್ಯವಸಾಯಕ್ಕಾಗಿ 8 ಕೋಟಿ ರೈತರು ಯೋಜನೆಯ ಲಾಭವನ್ನು ಪಢದಿದ್ದಾರೆ.

3 ಲಕ್ಷ ಕೋಟಿ ರಾಜ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಯೂರಿಯಾ ಸಬ್ಸಿಡಿ ಜಾಸ್ತಿ ಮಾಡಿದ್ದೇವೆ. ಆಯುಷ್ಮಾನ್ ಯೋಜನೆ ಕೋಟ್ಯಂತರ ಜನರ ಜೀವ ರಕ್ಷಣೆಗೆ ಮಾಡಿದೆ. ಆರೋಗ್ಯ ಸುಧಾರಿಸಿಕೊಳ್ಳಲು ಅನುಕೂಲ ಕಲ್ಪಿಸಿದೆ.

*ವಿಶ್ವಕರ್ಮ ಯೋಜನೆ ಘೋಷಣೆ*

ವಿಶ್ವಕರ್ಮ ಯೋಜನೆ ನೂತನ ಯೋಜನ ಮೂಲಕ ಓಬಿಸಿ ಸಮಾಜಗಳ‌ ಅಭಿವೃದ್ಧಿಗೆ ಮುಂದಾಗಿರುವದನ್ನು ಮೋದಿಜಿ ಈ ಸಂದರ್ಭದಲ್ಲಿ ತಿಳಿಸಿದರು.

*ವಿಶೇಷಃ* ಈ ಸಮಾರಂಭಕ್ಕೆ ದೇಶಾದ್ಯಂತ ವಿವಿಧ ವೃತ್ತಿಗೆ ಸೇರಿದ 1800 ಮಂದಿಯನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button