ಪ್ರಮುಖ ಸುದ್ದಿ

ಮೋಹರಂಃ ಮಂಗಳವಾರ ಕೊನೆಯ ದಿನ ಪೀರಗಳ ದರ್ಶನ

ಮೋಹರಂ ಸಂಭ್ರಮದಲ್ಲಿ ಸಂತಸ ಪಟ್ಟ ಜನತೆ

ಮೋಹರಂಃ ಮಂಗಳವಾರ ಕೊನೆಯ ದಿನ ಪೀರಗಳ ದರ್ಶನ

ಮೋಹರಂ ಸಂಭ್ರಮದಲ್ಲಿ ಸಂತಸ ಪಟ್ಟ ಜನತೆ

yadgiri, ಶಹಾಪುರಃ ಮೋಹರಂ ಅಂಗವಾಗಿ ನಗರದ ದಿಗ್ಗಿಬೇಸ್ ಬಳಿಯ ಇಮಾಮ್‍ಖಾಸಿಂ ಮಸೀದಿ, ಮಣಿಗಿರಿ. ಆಸರ್ ಮೊಹಲ್ಲಾ ಸೇರಿದಂತೆ ವಿವಿಧಡೆ ಪೀರಗಳ ಸ್ಥಾಪನೆ, ಮೆರವಣಿಗೆ ಈ ಬಾರಿ ಭಕ್ತಾಧಿಗಳಲ್ಲಿ ಸಂತಸ ಇಮ್ಮಡಿಗೊಳಿಸಿತ್ತು.
ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷದಿಂದ ಮೋಹರಂ ಆಚರಣೆಗೆ ಬ್ರೇಕ್ ಹಾಕಲಾಗಿತ್ತು. ಈ ವರ್ಷ ಎಲ್ಲಡೆ ಮೋಹರಂ ಹಬ್ಬವನ್ನು ಭಕ್ತರು ವಿಜೃಂಭಣೆಯಿಂದ ಆಚರಿಸುತ್ತಿರುವದು ಕಂಡು ಬಂದಿತು.

ಮಂಗಳವಾರ ಧಪನ್ ಅಂದರೆ ಮೋಗರಂ ಕೊನೆಯ ದಿನ ಪೀರಗಳ ಬಲಿದಾನದ ದಿನ ಹೀಗಾಗಿ ಬೆಳಗ್ಗೆಯಿಂದಲೇ ಭಕ್ತರು ಫೀರಗಳ ಮೆರವಣಿಗೆಯಲ್ಲಿ ಭಾಗವಹಿಸಿ ಸಂಭ್ರಮದಲ್ಲಿ ಮಿಂದೆದ್ದರು, ಸಂಜೆಯಾಗುತ್ತಿದ್ದಂತೆ ಒಂದೇ ಒಂದೇ ಪೀರಗಳ ದಫನ್ (ಬಲಿದಾನ) ಕಾರ್ಯದಲ್ಲಿ ತೊಡಗಿಸಿಕೊಂಡಿರುವದು ಕಂಡು ಬಂದಿತು.
ಕೊನೆಯ ದಿನ ಇಮಾಮ್ ಖಾಸಿಂ ಮಸೀದಿ ಬಳಿ ಜನಸ್ತೋಮವೇ ನೆರೆದಿತ್ತು. ಹಲಗೆ ನಾದಕ್ಕೆ ತಕ್ಕ ಹೆಜ್ಜೆ ಕುಣಿತ, ಬೋಸಯ್ಯ ಹಾಡುವ ಮೂಲಕ ಯುವಕರು ಖುಷಿ ಪಟ್ಟರು.

ಅಲ್ಲದೆ ಸಂಜೆ ಭಕ್ತಾಧಿಗಳು, ಮಹಿಳೆಯರು, ಮಕ್ಕಳು ಪೀರಗಳಿಗೆ ನೈವೇದ್ಯ ಮಾದ್ಲಿ, ಚೋಂಗ್ಯಾ, ಅನ್ನ ಸಾಂಬಾರ್ ಸೇರಿದಂತೆ ವಿವಿಧ ತರಕಾರಿ ಪಲ್ಯಗಳ ಸಮರ್ಪಣೆ ಮಾಡಿದರು. ಕಾಯಿ ಕರ್ಪೂರ ಸೇರಿದಂತೆ ಲೋಬಾನ ಹಾಕುವ ಮೂಲಕ ಭಕ್ತಿ ಸಮರ್ಪಣೆಗೈದರು.

ಅನ್ನ ಸಂತರ್ಪಣೆ

ನಗರದ ದಿಗ್ಗಿ ಬೇಸ್ ಬಳಿಯ ಇಮಾಮ್ ಖಾಸಿಂ ಮಸೀದಿ ಬಳಿ ಪೀರಗಳ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಆಯೋಜಿಸಿದ್ದರು. ನೂರಾರು ಜನ ಪ್ರಸಾದ ಸೇವಿಸಿ ಕೃತಜ್ಞತೆ ವ್ಯಕ್ತಪಡಿಸಿದರು. ಮೋಹರಂ ಹಬ್ಬ ಭಾವೈಕ್ಯತೆಯಿಂದ ಕೂಡಿದೆ. ಹಿಂಧೂ ಮುಸ್ಲಿಂ ಎಲ್ಲಾ ಮಸುದಾಯದವರು ಭಾಗವಹಿಸುತ್ತಾರೆ. ಇದೊಂದು ಸಮಾನತೆಗೆ ಮುನ್ನುಡಿಯಾಗುವ ಹಬ್ಬ. ಈ ಹಿನ್ನೆಲೆ ಸುತ್ತಲಿನ ಗ್ರಾಮದಿಂದಲೂ ಜನರು ಇಲ್ಲಿಗೆ ಆಗಮಿಸುತ್ತಾರೆ. ಮಂಗಳವಾರ ರಾತ್ರಿ 12 ಗಂಟೆ ನಂತರ ದಫನ್ ಕಾರ್ಯ ನಡೆಯಲಿದೆ ಎಂದು ಇಮಾಮ್ ಖಾಸಿಂ ಭಕ್ತ ಮಹ್ಮದ್ ಅಲಿ ಮಕ್ತಾಪುರ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button