ಶಹಾಪುರಃ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕುರಿಗಾಯಿ ಪತ್ತೆ ಕಾರ್ಯಾಚಾರಣೆ
ಯಕ್ಷಿಂತಿಃ ಮೊಸಳೆ ಬಾಯಿಗೆ ಆಹಾರವಾದ ಕುರಿಗಾಯಿ
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡು
ಶಹಾಪುರಃ ಕುರಿಗಳಿಗೆ ನೀರು ಕುಡಿಸಲು ಕೃಷ್ಣಾ ನದಿ ತೀರಕ್ಕೆ ಇಳಿದ ಕುರಿಗಾಯಿಯನ್ನೆ ಮೊಸಳೆ ಹೊತ್ತೊಯ್ದ ಘಟನೆ ತಾಲೂಕಿನ ಯಕ್ಷಿಂತಿ ಗ್ರಾಮ ಸಮೀಪದ ಕೃಷ್ಣಾ ನದಿ ತೀರದಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ.
ತಾಲೂಕಿನ ಶಾರದಹಳ್ಳಿ ಗ್ರಾಮದ ನಿವಾಸಿ ಎನ್ನಲಾದ ಲಕ್ಷ್ಮಣ ತಂದೆ ಭೀಮಣ್ಣ (34) ಎಂಬಾತನೇ ಮೊಸಳೆಗೆ ಆಹಾರವಾದ ದುರ್ದೈವಿ ಎಂದು ತಿಳಿದು ಬಂದಿದೆ. ಲಕ್ಷ್ಮಣ ಕಳೆದ ಒಂದು ತಿಂಗಳ ಹಿಂದೆಯಷ್ಟೆ ಯಕ್ಷಿಂತಿ ಗ್ರಾಮ ಸಮೀಪ ಕೃಷ್ಣಾ ನದಿ ತೀರದ ಜಮೀನೊಂದರಲ್ಲಿ ಕುರಿ ಹಟ್ಟಿ ಹಾಕಿಕೊಂಡಿದ್ದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಅರಣ್ಯ ಇಲಾಖೆ ಭೀಮರಾಯನ ಗುಡಿ ವಲಯ ಅಧಿಕಾರಿ ಐ.ಬಿ.ಹೂಗಾರ ಸೇರಿದಂತೆ ಇತರರು ಬೀಡು ಬಿಟ್ಟಿದ್ದಾರೆ.
ಕುರಿಗಾಯಿ ಲಕ್ಷ್ಮಣ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಸಂಜೆಯಾದರೂ ಪತ್ತೆಯಾಗಿರುವದಿಲ್ಲ. ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ವಿಷಯ ತಿಳಿದು ನದಿ ತೀರದಲ್ಲಿ ಜನಸ್ತೋಮವೇ ನೆರೆದಿದೆ.
ಕುರಿಗಾಯಿ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ತೀವ್ರ ಕಾರ್ಯಾಚಾರಣೆ ನಡೆಸುತ್ತಿದೆ. ಎಲ್ಲೂ ಕುರಿಗಾಯಿ ಪತ್ತೆಯಾಗಿರುವದಿಲ್ಲ. ಲಕ್ಷ್ಮಣ ದೇಹ ಪತ್ತೆಗಾಗಿ ತೀವ್ರ ಶೋಧ ನಡೆದಿದ್ದು, ನದಿ ತೀರಕ್ಕೆ ಜನತೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ.
-ಐ.ಬಿ.ಹೂಗಾರ. ಅರಣ್ಯ ಇಲಾಖೆ ಅಧಿಕಾರಿ.