ಸಗರನಾಡಿನ “ಕೊಡಚಾದ್ರಿ” ಮಡ್ಡಿ ಮಲ್ಕಪ್ಪನ ಬೆಟ್ಟ – ಶಿರವಾಳ ಹಿತಾನುಭವ

ಸಗರನಾಡಿನ “ಕೊಡಚಾದ್ರಿ” ಮಡ್ಡಿ ಮಲ್ಕಪ್ಪನ ಬೆಟ್ಟದಲ್ಲಿ ವಾಯು ವಿಹಾರ
ಈ ದಿನ ಆತ್ಮೀಯ ಹಿರಿಯ ಅಧಿಕಾರಿಗಳಾದ ಶ್ರೀ ತಿಪ್ಪಾರೆಡ್ಡಿ ಸರ್ BCM, ಶ್ರೀ ಅಮರೇಶ ಸರ್ EO TP, ಶ್ರೀ ತಳವಾರ ಸರ್ RFO ಅವರುಗಳ ಆಹ್ವಾನದ ಮೇರೆಗೆ ಸುರಪುರ ತಾಲೂಕಿನ (ಯಾದಗಿರಿ ಜಿಲ್ಲೆ)ಮಡ್ಡಿ ಮಲ್ಕಪ್ಪನ ಬೆಟ್ಟದಲ್ಲಿ ಬೆಳಗಿನ ಜಾವದ ವಾಯು ವಿಹಾರ ಮಾಡಲಾಯಿತು. ಈ ಸುಂದರ ಹಿತಾನುಭವ ತಮ್ಮೊಂದಿಗೆ ಹಂಚಿಕೊಳ್ಳಬೇಕೆಂಬ ಮಹಾದಾಸೆಯಿಂದ ಈ ಬರಹ.
ಕಡಿದಾದ ಬೆಟ್ಟವನ್ನು ಹತ್ತುವುದು ಒಂದು ರೀತಿಯಲ್ಲಿ ಸಾಹಸದ ಚಾರಣ ಅನುಭವವನ್ನು ನೀಡಿತು. ಮೇಲೆ ನಿಂತು ಕಣ್ಣು ಹಾಯಿಸಿದಷ್ಟೂ ಮಂಜು-ಮೋಡಗಳು ಆವರಿಸಿದ ವಾತಾವರಣ ನಮ್ಮನ್ನೆಲ್ಲಾ ಯಾವುದೋ ಹೊಸ ಲೋಕಕ್ಕೆ ಕರೆದೊಯ್ಯಿತು.
ಅಲ್ಲಿನ ಕೆಲವೊಂದು ಪುರಾತನ ಶಿಲ್ಪಗಳು ನನ್ನ ಸಂಶೋಧನಾ ಹಸಿವನ್ನು ತಣಿಸಿದರೆ, ಗಡದ್ದಾಗಿ ಸವಿದ ಬಿಸಿ ಬಿಸಿ ವಗ್ರಾಣಿ ಮತ್ತು ಮಿರ್ಚಿ ಭಜಿ ಹಾಗೂ ಸ್ವಲ್ಪ ಸ್ವಲ್ಪವೇ ಹೀರಿದ ಕಾಫಿ ದಣಿದ ದೇಹವನ್ನು ತಣಿಸಿದ್ದವು. ಇಂಥ ರಮ್ಯ ತಾಣದಲ್ಲಿ ಮರಡಿ ಮಲ್ಲಿಕಾರ್ಜುನ (ಶಿವ) ದೇವಾಲಯವಿದೆ. ಮಹಾಶಿವ ಲಿಂಗುವಿನ ದರ್ಶನವು ತಮಗಾಗುತ್ತದೆ.
ಸುತ್ತಲು ಹಸಿರು ಹೊದಿಕೆಯ ಸಸ್ಯಗಳು ಕಲ್ಲು ಬಂಡೆ, ಗುಡ್ಡವನ್ನು ಆವರಿಸಿವೆ. ಒಟ್ಟಾರೆ ಮರಡಿ ಮಲ್ಲಿಕಾರ್ಜುನನ ಗುಡ್ಡ “ಸಗರ ನಾಡಿನ ಕೊಡಚಾದ್ರಿ” ಎನ್ನಬಹುದು.
ಚಾರಣ ಪ್ರಿಯ ವಾಯು ವಿಹಾರಿಗಳು, ಇತಿಹಾಸದ ಸಂಶೋಧನಾಸಕ್ತರು, ಯೋಗ ಮತ್ತು ದೇಹದಾರ್ಢ್ಯ ಪಟುಗಳು, ಮುಕ್ತಿ ಮಾರ್ಗವನ್ನರಸುವ ಭಕ್ತಿ ಪ್ರಿಯರು, ಮನಃಶಾಂತಿಯನ್ನು ಬಯಸುವ ಧ್ಯಾನಾಸಕ್ತರು, Photography ಪ್ರಿಯರು, ನಿಸರ್ಗ ಪ್ರಿಯರು, ಪ್ರಾಣಿ-ಪಕ್ಷಿ ಪ್ರಿಯರು, ತೆಳ್ಳಗಾಗ ಬೇಕೆನ್ನುವವರು ಒಮ್ಮೆ ನೋಡಲೇ ಬೇಕಾದ ಸ್ಥಳವಿದು ಸಾಧ್ಯವಾದರೆ ಈ ಮಂಜಿನ ದಿನಗಳು ಮಾಯವಾಗುವುದರೊಳಗೆ ಕುಟುಂಬದ ಸದಸ್ಯರು-ಆಪ್ತ ಮಿತ್ರರೊಂದಿಗೆ ನೀವೂ ಹೋಗಿ ಬನ್ನಿ.
I Don’t Run To Add Days To My Life, I Run To Add Life To My Days.….
🙏🙏🙏
🦅ಡಾ.ಎಂ.ಎಸ್.ಸಿರವಾಳ
ಸಹಾಯಕ ಖಜಾನೆ ಅಧಿಕಾರಿ
ಸುರಪುರ.