ಸ್ಪೆಷಲ್ ಮಟನ್ ಬಿರಿಯಾನಿ ಮಾಡುವ ವಿಧಾನ ನಿಮಗಾಗಿ
ಬೇಕಾಗುವ ಪದಾರ್ಥಗಳು…
ಕುರಿ ಮಾಂಸ – ಅರ್ಧ ಕೆ.ಜಿ
ಬಾಸುಮತಿ ಅಕ್ಕಿ – 1/2 ಕೆ.ಜಿ
ಶುಂಠಿ – ಬೆಳ್ಳುಳ್ಳಿ ಪೇಸ್ಟ್-2 ಚಮಚ
ಕೊತ್ತಂಬರಿಸೊಪ್ಪು-ಸ್ವಲ್ಪ
ಪುದಿನಸೊಪ್ಪು- ಸ್ವಲ್ಪ
ಹಸಿಮೆಣಸಿನಕಾಯಿ – 15
ಮೊಸರು – 2 ಚಮಚ
ಖಾರದಪುಡಿ – 2 ಚಮಚ
ದನಿಯಾ ಪುಡಿ – 1 ಚಮಚ
ಅರಿಸಿನ ಪುಡಿ – ಸ್ವಲ್ಪ
ಬಿರಿಯಾನಿ ಮಸಾಲೆ – 2 ಚಮಚ
ಪತ್ರೆ – 2 ಎಸಳು
ಗೋಡಂಬಿ – 10
ಕಾಳುಮೆಣಸು – 20
ಏಲಕ್ಕಿ – 2
ಲವಂಗ – 5
ಚಕ್ಕೆ – 2 ಇಂಚು ಉದ್ದದ್ದು
ಪಲಾವ್ ಎಲೆ – 2
ಮೊರಾಠಿ ಮೊಗ್ಗು – 2
ಈರುಳ್ಳಿ – 5
ಟೊಮೆಟೊ – 3
ಎಣ್ಣೆ, ತುಪ್ಪ- ಸ್ವಲ್ವ
ಉಪ್ಪು- ರುಚಿಗೆ ತಕ್ಕಷ್ಟು
ಮಾಡುವ ವಿಧಾನ…
ಚೆನ್ನಾಗಿ ತೊಳೆದ ಮಾಂಸಕ್ಕೆ, ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ.
ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಕೊತ್ತಂಬರಿ ಮತ್ತು ಪುದಿನ ಕತ್ತರಿಸಿಟ್ಟುಕೊಳ್ಳಿ.
ಅಗಲವಾದ ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಮರಾಠಿ ಮೊಗ್ಗು, ಹಸಿಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಳ್ಳಿ.
ನಂತರ ಬೇಯಿಸಿದ ಮಾಂಸ, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, 2 ಕಪ್ ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ.
ನಂತರ ಟೊಮೆಟೊ ಹಾಕಿ ಮತ್ತೆ ಹುರಿಯಿರಿ. ಎಣ್ಣೆ ಬಿಡುವವರೆಗೂ ಕುದಿಸಿ. ಅಗತ್ಯಕ್ಕೆ ತಕ್ಕಷ್ಟು ಮಾಂಸ ಬೇಯಿಸಿದ ನೀರನೇ ಬಳಸಿಕೊಳ್ಳಿ. ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಖಾರ ಕಡಿಮೆಯಿದ್ದನ್ನು ಸೇರಿಸಿ.
ಅಕ್ಕಿ ಮುಕ್ಕಾಲು ಭಾಗ ಬೆಂದಾಗ (ನೀರು ಕಡಿಮೆಯಾದಾಗ) ಕತ್ತರಿಸಿದ ಕೊತ್ತಂಬರಿ ಮತ್ತು ಪುದಿನವನ್ನು ಉದುರಿಸಿ ಮುಚ್ಚಳ ಮುಚ್ಚಿ ಕುಕರ್ ನಲ್ಲಿ ಬೇಯಲು ಇಡಿ. 2 ಕೂಗು ಕೂಗಿದ ಬಳಿಕ ಮುಚ್ಚಳ ತೆಗೆದರೆ ರುಚಿಕರವಾದ ಮಟನ್ ಬಿರಿಯಾನಿ ಸವಿಯಲು ಸಿದ್ಧ.