ಪ್ರಮುಖ ಸುದ್ದಿ
ಬಿಯರ್ ಕುಡಿಯುವವರೇ ಎಚ್ಚರ ಎಚ್ಚರ..! ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆಃ 25 ಕೋಟಿ ಮೌಲ್ಯದ ಬಿಯರ್ ಜಪ್ತಿ, ಅದ್ಯಾವ ಬಿಯರ್ ಗೊತ್ತಾ.?
25 ಕೋಟಿ ಮೌಲ್ಯದ ಬಿಯರ್ ಜಪ್ತಿ
ಬಿಯರ್ ಕುಡಿಯುವವರೇ ಎಚ್ಚರ ಎಚ್ಚರ..!
ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆಃ 25 ಕೋಟಿ ಮೌಲ್ಯದ ಬಿಯರ್ ಜಪ್ತಿ, ಅದ್ಯಾವ ಬಿಯರ್ ಗೊತ್ತಾ.?
ಮೈಸೂರಃ ಬಿಯರ್ ಒಂದರಲ್ಲಿ ಅಪಾಯಕಾರಿ ಅಂಶವಾದ ಸೆಡಿಮೆಂಟ್ ಪತ್ತೆಯಾಗಿರುವ ಹಿನ್ನೆಲೆ ಅಬಕಾರಿ ಅಧಿಕಾರಿಗಳು 25 ಕೋಟಿ ರೂ. ಮೌಲ್ಯದ ಅಪಾಯಕಾರಿ ಅಂಶ ಪತ್ತೆಯಾದ ಹಿನ್ನೆಲೆ 78,678 ಕಿಂಗ್ ಫಿಶರ್ ಬಿಯರ್ ಬಾಟಲ್ ಬಾಕ್ಸ್ ಗಳನ್ನು ವಶಕ್ಕೆ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಈ ಕುರಿತು ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಮಾಹಿತಿ ನೀಡಿದ್ದು, ನಂಜನಗೂಡು ಘಟಕದಲ್ಲಿ ತಯಾರಿಸಲಾದ ಬಿಯರ್ ಸ್ಟ್ರಾಂಗ್ ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಈ ಕುರಿತು ಠಾಣೆಯೊಂದರಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಕೈಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.