ಪ್ರಮುಖ ಸುದ್ದಿ
ನಾಯಿಯ ಹೆಸರು “ನೂರಿ” ಇಸ್ಲಾಂ ಧರ್ಮದ ಭಾವನೆಗೆ ಧಕ್ಕೆ ಕೋರ್ಟ್ ಮೊರೆ ಹೋದ ಫರ್ಹಾನ್
ನಾಯಿಮರಿಗೆ "ನೂರಿ" ಹೆಸರು ಧಾರ್ಮಿಕಭಾವನೆಗೆ ಧಕ್ಕೆ.!
ರಾಗಾ ತನ್ನ ತಾಯಿಗೆ ನೀಡಿದ ನಾಯಿಗೆ “ನೂರಿ” ಎಂದು ಹೆಸರಿಟ್ಟಿರುವದು ಧಾರ್ಮಿಕ ಭಾವನೆಗೆ ಧಕ್ಕೆ – ಫರ್ಹಾನ್
ನಾಯಿಯ ಹೆಸರು “ನೂರಿ” ಇಸ್ಲಾಂ ಧರ್ಮದ ಭಾವನೆಗೆ ಧಕ್ಕೆ ಕೋರ್ಟ್ ಮೊರೆ ಹೋದ ಫರ್ಹಾನ್
ವಿವಿ ಡೆಸ್ಕ್ಃ ಈಚೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತನ್ನ ತಾಯಿ ಸೋನಿಯಾ ಗಾಂಧಿಗೆ ಒಂದು ನಾಯಿ ಮರಿಯನ್ನು ಗಿಫ್ಟ್ ಆಗಿ ನೀಡಿದ್ದರು. ಅಲ್ಲದೆ ಆ ನಾಯಿ ಮರಿಗೆ “ನೂರಿ” ಎಂದು ಹೆಸರಿಟ್ಟಿದ್ದರು. ಈ ಸುದ್ದಿ ಮಾಧ್ಯಮದಲ್ಲೂ ಪ್ರಕಟವಾಗಿತ್ತು.
ಆದರೆ ಇದೀಗ ಯುಪಿಯ ಫರ್ಹಾನ್ ಎಂಬ ವ್ಯಕ್ತಿ ರಾಹುಲ್ ಗಾಂಧಿ ಅವರು ನಾಯಿ ಮರಿಗೆ “ನೂರಿ” ಎಂದು ಹೆಸರಿಟ್ಟಿರುವದು ಇಸ್ಲಾಂ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿದೆ ಈ ಕೂಡಲೇ ರಾಹುಲ್ ಗಾಂಧಿ ಮೇಲೆ ಎಫ್ ಐ ಆರ್ ದಾಖಲಿಸಬೇಕೆಂದು ಆಗ್ರಹಿಸಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ.
ಫರ್ಹಾನ್ ಸಲ್ಲಿಸಿದ ಅರ್ಜಿ ಸ್ವೀಕರಿಸಿದ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದು, ಅಂತಿಮವಾಗಿ ಯಾವ ಆದೇಶ ಹೊರಬೀಳಲಿದೆ ಎಂಬುದು ಕಾದು ನೋಡಬೇಕು.