ಶಹಾಪುರಃ ನಗರದ ನಕಲಿ ವೈದ್ಯನ ಮೇಲೆ ಪ್ರಕರಣ ದಾಖಲು
ಶಹಾಪುರಃ ನಗರದ ನಕಲಿ ವೈದ್ಯನ ಮೇಲೆ ಪ್ರಕರಣ ದಾಖಲು
ಶಹಾಪುರಃ ನಗರದಲ್ಲಿ ಮೇ.18 ರಂದು ಕೊರೊನಾ ತಡೆ ಜಾಗೃತಿ ಹೊರಟಿದ್ದಾಗ, ಪಟ್ಟಣದ ಗಾಂಧಿಚೌಕ ಬಳಿ ಓರ್ವ ನಕಲಿ ವೈದ್ಯ ಕ್ಲಿನಿಕ್ ನಡೆಸುತ್ತಿರುವ ಮಾಹಿತಿ ದೊರೆತ ಕಾರಣ ಕ್ಲಿನಿಕ್ ಒಳಗಡೆ ಹೋಗಿ ವೈದ್ಯನನ್ನು ವಿಚಾರಿಸಲಾಗಿ ಕ್ಲಿನಿಕಲ್ ಪರವಾನಿಗೆ ಇತರೆ ಡಾಕ್ಯುಮೆಂಟ್ ಸಮರ್ಪಕವಾಗಿ ಒದಗಿಸಲು ಎರಡು ದಿನಗಳ ಕಾಲವಕಾಶ ನೀಡಲಾಗಿತ್ತು.
ಕಾಲವಕಾಶ ಮೀರಿದ್ದು ಆತನ ಮೇಲೆ ಸೂಕ್ತ ಕ್ರಮಕ್ಕಾಗಿ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೇದಾರ ತಿಳಿಸಿದ್ದಾರೆ.
ಅಂದು ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ತಹಸೀಲ್ದಾರ ಜಗನ್ನಾಥರಡ್ಡಿ, ಪಿಎಸ್ಐ ಚಂದ್ರಕಾಂತ ಸೇರದತೆ ಇತರೆ ಅಧಿಕಾರಿ ಸಿಬ್ಬಂದಿಗಳು ಇದ್ದರು.
ನಕಲಿ ವೈದ್ಯನ ಸ್ವತಃ ಹೇಳಿಕೆ ಪ್ರಕಾರ ಬಿಎಎಂಎಸ್ ವೈದ್ಯಕೀಯ ಪದವಿಧರನೋರ್ವರ ಕ್ಲಿನಿಕ್ ಇದಾಗಿದ್ದು, ಅವರು ಬಾರದಿದ್ದಾಗ ನಾನು ನೋಡುತ್ತೇನೆ ಎಂದು, ಆರೋಪಿ ಅಮೃತ ತಿಳಿಸಿದ್ದು, ಅಲ್ಲಿಂದ ಕಾಗದ ಪತ್ರಗಳು ತರುತ್ತೇನೆಂದು ಕಾಲ್ಕಿತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.