ಪ್ರಮುಖ ಸುದ್ದಿ
ಅಭಿನಯ ಶಾರದೆ ಜಯಂತಿ ಅಸ್ತಂಗತ
ಅಭಿನಯ ಶಾರದೆ ಜಯಂತಿ ಅಸ್ತಂಗತ
ಬೆಂಗಳೂರಃ ಗಂಧದನಾಡಿನ ಹಿರಿಯ ನಟಿ ಅಭಿನಯ ಶಾರದೆ ಜಯಂತಿ (76) ಇಂದು ನಗರದ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.
ನಟಿ ಜಯಂತಿ ಅವರು ಒಟ್ಟು ಆರು ಭಾಷೆಗಳಲ್ಲಿ ನಟಿಸಿದ್ದು, ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರ ಕಾಲದಲ್ಲಿ ಜಯಂತಿಯವರ ಅಭಿನಯಕ್ಕೆ ಮಾರು ಹೋಗದವರೇ ಇಲ್ಲ.
ಹೀಗಾಗಿ ಅವರು ಸ್ಯಾಂಡಲ್ ವುಡ್ ಅಭಿನಯ ಶಾರದೆಯಾಗಿ ಬೆಳೆದು ನಿಂತಿದ್ದರು. ಯಾವುದೇ ಪಾತ್ರವಿರಲಿ ಅವರ ಆವಭಾವ ಅದಕ್ಕೆ ತಕ್ಕುದಾಗಿ ನಟಿಸುವ ಮೂಲಕ ಅವರು ಮನೆ ಮಾತಾಗಿದ್ದರು. ಇತ್ತೀಚೆಗೆ ಅವರು ತಾಯಿ ಪಾತ್ರದಲ್ಲೂ ಜೀವತುಂಬಿ ನಟಿಸುತ್ತಿದ್ದರು.
1965 ರಲ್ಲಿ “ಮಿಸ್ ಲೀಲಾವತಿ” ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು, ಅಲ್ಲದೆ ಮನಸ್ಸಿನಂತೆ ಮಾಂಗಲ್ಯ, ಧರ್ಮದ ದಾರಿ ತಪ್ಪಿತು, ಮಸಣದ ಹೂವು, ಆನಂದ್ ಚಿತ್ರಗಳ ಅಭಿಯಾನಕ್ಕೆ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದರು.