ಪ್ರಮುಖ ಸುದ್ದಿ

ಕೊರೊನಾ ಮಧ್ಯ ಗೋವಾ ಬೀಚ್ ನಲ್ಲಿ ಹೊಸ ವರ್ಷ ಆಚರಣೆಗೆ ಸೇರಿದ ಜನಸ್ತೋಮ

ಹೊಸ ವರ್ಷ ಸ್ವಾಗತಿಸಲು ಗೋವಾದತ್ತ ಪ್ರವಾಸಿಗರ ದಂಡು

ಕೊರೊನಾ ಮಧ್ಯ ಗೋವಾ ಬೀಚ್ ನಲ್ಲಿ ಹೊಸ ವರ್ಷ ಆಚರಣೆಗೆ ಸೇರಿದ ಜನಸ್ತೋಮ

ಗೋವಾಃ ಹೊಸ ವರ್ಷ ಸಂಭ್ರಮಾಚರಣೆಗೆ ಗೋವಾದ ಹಲವು ಬೀಚ್ ಗಳಲ್ಲಿ ದೇಶದ ವಿವಿಧ ಮೂಲಗಳಿಂದ ಪ್ರವಾಸಿಗರ ದಂಡು ಆಗಮಿಸಿದೆ. ಇಲ್ಲಿನ ಎಲ್ಲಾ ಪ್ರವಾಸ ತಾಣಗಳು ಈಗಾಗಲೇ ತುಂಬಿರುವದ ದೃಶ್ಯ ಕಂಡು ಬರುತ್ತಿದೆ.

ಕೊರೊನಾ ಭೀತಿ ನಡುವೆ ಹೊಸ ವರ್ಷ ಆಚರಣೆಗೆ ಜನಸ್ತೋಮವೇ ನೆರೆದಿದೆ. ಇನ್ನೂ ಪ್ರವಾಸಿಗರ ಆಗಮನ ಜಾಸ್ತಿಯಾಗುತ್ತಿದ್ದು, ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ ಎನ್ನಬಹುದು.

ಆದರೆ ಕೊರೊನಾ ಭೀತಿ ನಡುವೆಯೇ ಜನ ಸೇರಿರುವದು ಆತಂಕಕ್ಕೆ ಎಡೆ ಮಾಡಿದೆ. ಮಹಾರಾಷ್ಟ್ರ,‌ಆಂದ್ರ, ಕರ್ನಾಟಕದ ಜನತೆ ಹೆಚ್ವಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಕರ್ನಾಟಕದಲ್ಲಿ ಬಹುತೇಕ ಹೊಟೇಲ್ ರೂಂಗಳು ಭರ್ತಿಯಾಗಿದ್ದು, ಗೋವಾದತ್ತ ಜನ‌ಮುಖ ಮಾಡಿದೆ ಎನ್ನಲಾಗಿದೆ.

ಆದರೆ‌ ಕೋವಿಡ್ ಮೂರನೇಯ ಅಲೆ ಆತಂಕ ಹೆಚ್ಚಿದ್ದು, ಪ್ರವಾಸಿಗರು ಎಚ್ಚರವಹಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಮಹಾಮಾರಿ ಅತೀವ ಸಂತೋಷದಿಂದ ಹೊಸ ವರ್ಷ ಆಚರಣೆ‌ ಮಾಡಲು ಆಗಮಿಸಿದ್ದ ಜನರ ಬದುಕನ್ನೆ ನುಂಗಬಹುದು. ಊಹೆಗೂ ಮೀರಿದ ಪ್ರಹಸನ ನಡೆಯದಿರಲಿ ಎಂದೇ ದೇರನ್ನು ಪ್ರಾರ್ಥಿಸೋಣ.

ಹೊಸ ವರ್ಷ‌ ಆಚರಣೆ ಖುಷಿಯಲ್ಲಿ ಮಹಾಮಾರಿ ಬರಮಾಡಿಕೊಂಡು ಮನುಜ ಕುಗ್ಗದಿರಲಿ. ಈ ನಡುವೆ ಪ್ರವಾಸೋದ್ಯಮ ಅವಲಂಬಿತ ಉದ್ಯೋಗಿಗಳು ಚಿಂತೆಗೀಡಾಗಿದ್ದು, ಪ್ರವಾಸಿಗರೇನೂ ಆಗಮಿಸಿದ್ದಾರೆ ಆದರೆ ಎಂದಿನಂತೆ ವ್ಯಾಪಾರ‌ ವಹಿವಾಟು ನಡೆಯುತ್ತಿಲ್ಲ. ಪ್ರವಾಸಿಗರು ಆರ್ಥಿಕವಾಗಿ ಸಮರ್ಥರಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಏನೇ ಆಗಲಿ ಕೋವಿಡ್ ಸಂಕಟದಲ್ಲಿ ವಿಜೃಂಬಿಸುವ, ಮೋಜು‌ ಮಸ್ತಿ ಮಾಡುವದನ್ನು ಬಿಟ್ಟು ಜನಹಿತ, ಲೋಕಹಿತ ಬಯಸುವ ಕಾರ್ಯದತ್ತ ಜನ ಹೆಜ್ಜೆ ಹಾಕಲಿ ಎಂಬುದು ವಿವಿ ಆಶಯ.

Related Articles

Leave a Reply

Your email address will not be published. Required fields are marked *

Back to top button