ನಿಧನ ವಾರ್ತೆ
ಸುಬ್ಬಣ್ಣ ದೊರೆ ಕಕ್ಕಸಗೇರಾ (75)
yadgiri, ಶಹಾಪುರಃ ತಾಲೂಕಿನ ಕಕ್ಕಸಗೇರಾ ಗ್ರಾಮದ ಹಿರಿಯ ಜೀವಿ ಸುಬ್ಬಣ್ಣ ದೊರೆ (75) ಶುಕ್ರವಾರ ಸಂಜೆ ನಿಧನ ಹೊಂದಿದ್ದಾರೆ. ಮೃತರು, ತಾಲೂಕಿನ ಮುಖಂಡರಾದ ಶೇಖರ ದೊರೆ ಅವರ ತಂದೆಯವರಾಗಿದ್ದಾರೆ. ಮೃತರು, ಇಬ್ಬರು ಗಂಡು, ಐದು ಜನ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಶನಿವಾರ ಮದ್ಯಾಹ್ನ 3 ಗಂಟೆಗೆ ಸ್ವಗ್ರಾಮ ಕಕ್ಕಸಗೇರಾದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪಃ ಮಾಜಿ ಶಾಸಕ ಗುರು ಪಾಟೀಲ್, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಬಿಜೆಪಿಯ ಅಮೀನರಡ್ಡಿ ಯಾಳಗಿ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಪ್ರಮುಖರು, ನಗರಸಭೆ ಸದಸ್ಯರು, ಯುವ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
——————