ಪ್ರಮುಖ ಸುದ್ದಿ
ಜಾತ್ರೆ, ರಥೋತ್ಸವ ನಡೆಸಲು ಗ್ರೀನ್ ಸಿಗ್ನಲ್‌ಃ ನಿರ್ಬಂಧ ತೆರವು
ಜಾತ್ರೆ, ಉತ್ಸವ ನಡೆಸಲು ನಿರ್ಬಂಧ ವಾಪಸ್ಃ ಧಾರ್ಮಿಕ ದತ್ತಿ ಇಲಾಖೆ ಘೊಷಣೆ
ವಿವಿ ಡೆಸ್ಕ್ಃ ಕೋವಿಡ್ ಹಿನ್ನೆಲೆ ರಾಜ್ಯದ ದೇವಾಲಯಗಳಲ್ಲಿ ಭಕ್ತರ ದರ್ಶನ, ಜಾತ್ರಾ ಮಹೋತ್ಸವ, ಉತ್ಸವ, ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಸದಂತೆ ನಿರ್ಬಂಧಿಸಲಾಗಿದ್ದ ಆದೇಶವನ್ನು ಸರ್ಕಾರ ಇದೀಗ ವಾಪಸ್ ಪಡೆದಿದೆ.
ಕೋವಿಡ್ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದರಿಂದ ಧಾರ್ಮಿಕ ದತ್ತಿ ಇಲಾಖೆ, ರಾಜ್ಯದ ದೇವಾಲಯಗಳಲ್ಲಿ ಜಾತ್ರಾ ಮಹೋತ್ಸವ, ವಿಶೇಷ ಪೂಜೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.