Home

ದೇಶಾದ್ಯಂತ ಏಕರೂಪ ನೋಂದಣಿ ಜಾರಿ – ನಿರ್ಮಲಾ ಸೀತಾರಾಮನ್

ಒಂದು ದೇಶ ಒಂದು ನೋದಣಿ ವ್ಯವಸ್ಥೆ ಜಾರಿ – ವಿತ್ತ ಸಚಿವೆ

ನವದೆಹಲಿಃ ರಾಷ್ಟ್ರೀಯ ಜನರಿಕ್ ದಾಖಲೆಗಳ ನೋಂದಣಿ ವ್ಯವಸ್ಥೆ ಯೊಂದಿಗಿನ ಸಂಪರ್ಕ ಮತ್ತು ಸೇರ್ಪಡೆ ಮೂಲಕ ದೇಶದಾದ್ಯಂತ ಏಕರೂಪ ನೋಂದಣಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಕರಾರು ಒಪ್ಪಂದಕ್ಕೆ ಸಂಬಂಧಿಸಿದಂತೆ ಒನ್ ನೇಷನ್ ಒನ್ ರಿಜೆಸ್ಟ್ರೇಷನ್ ಸಾಫ್ಟ್ ವೇರ್ ವ್ಯವಸ್ಥೆಗೊಳಿಸಲು ಸೂಚಿಸಲಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಅಪ್ ಡೇಟ್ ಆಗುವದು ಅಗತ್ಯವಿದೆ.

ಡಿಜಟಲೀಕರಣ ವ್ಯವಸ್ಥೆ ಯಿಂದ ಸಾಕಷ್ಟು ರೀತಿಯ ಅನುಕೂಲವಾಗಲಿದೆ. ಕರಾರು ದಾಖಲಾತಿಗಳ ನೋಂದಣಿಗೆ ಇದು ಅನ್ವಯಗೊಳ್ಳಲಿದೆ. ಭೂ ದಾಖಲೆಗಳ ಸಮರ್ಥ ಬಳಕೆಗೆ ರಾಜ್ಯ ಸರ್ಕಾರಗಳಿಗೆ ಉತ್ತೇಜನ ನೀಡಲು ವಿಶಿಷ್ಟ ಭೂ ದಾಖಲೆ ಗುರುತಿನ ಸಂಖ್ಯೆಗಳನ್ನು ಜಾರಿಗೆ ತರಲಾಗುವದು.

ಅಲ್ಲದೆ ಮಾಹಿತಿ ತಂತ್ರಜ್ಞಾನ ಆಧಾರಿತ ದಾಖಲೆಗಳ ಸಂಗ್ರಹ ಹಾಗೂ ವರ್ಗಾವಣೆ ವ್ಯವಸ್ಥೆ ಯನ್ನು 9 ಅಕೃತ ಭಾಷೆಗಳಲ್ಲಿ ರೂಪಿಸಲಾಗುತ್ತದೆ ಎಂದು ವಿವರಿಸಿದರು.

Related Articles

Leave a Reply

Your email address will not be published. Required fields are marked *

Back to top button